‘ವೈರಲ್ ಸೊಂಕಿನಿಂದ ದೃಷ್ಟಿ ನಷ್ಟ ಸಾಧ್ಯತೆ’

Update: 2018-10-15 16:48 GMT

ಬೆಂಗಳೂರು, ಅ. 15: ಡೆಂಗ್, ಚಿಕುನ್‌ಗುನ್ಯಾ ಸೇರಿದಂತೆ ವೈರಲ್ ಸೋಂಕುಗಳು ಅಥವಾ ಟೈಫಾಯಿಡ್ ಮತ್ತು ರಿಕೆಟ್ಸಿಯಾದಂತಹ ಬ್ಯಾಕ್ಟೀರಿಯಾ ಸೋಂಕುಗಳಿಂದ ರೋಗಿಗಳು ತಾತ್ಕಾಲಿಕ ಅಥವಾ ಶಾಶ್ವತ ದೃಷ್ಟಿ ನಷ್ಟದ ಸಾಧ್ಯತೆಗಳಿವೆ ಎಂದು ನಾರಾಯಣ ನೇತ್ರಾಲಯದ ಡಾ.ಕೆ.ಭುಜಂಗ ಶೆಟ್ಟಿ ಎಚ್ಚರಿಸಿದ್ದಾರೆ.

ವೈರಲ್ ಸೋಂಕಿನಿಂದ ಜ್ವರ ಬಂದು, ವಾಸಿಯಾದ ಹಲವು ದಿನಗಳಿಂದ ಹಲವು ವಾರಗಳಲ್ಲಿ ಕಣ್ಣಿನ ಸೋಂಕು ಕಾಣಿಸಿಕೊಳ್ಳಬಹುದು. ಆಪ್ಟಿಕ್ ನ್ಯೂರಿಟಿಸ್, ರೆಟಿನಿಟಿಸ್ ಮತ್ತು ವ್ಯಾಸ್ಕುಲರ್ ಆಕ್ಲುಷನ್ಸ್‌ನಿಂದ ದೃಷ್ಟಿ ನಷ್ಟ ಉಂಟಾಗಬಹುದು. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗಮನಿಸಿ ಚಿಕಿತ್ಸೆ ನೀಡಿದರೆ ನೇತ್ರ ಸಮಸ್ಯೆಗಳು ದೂರವಾಗಲಿದೆ ಎಂದು ಹೇಳಿದರು.

ಫಿವರ್ ಅಸೋಸಿಯೇಟೆಡ್ ವಿಷುಯಲ್ ಔಟ್‌ಕಮ್ ಇನ್ವಾಲ್ವಿಂಗ್ ಉಯಾ ಅಂಡ್ ರೆಟಿನಾ(ಫೇವರ್) ಅಧ್ಯಯನ ನಡೆಸಿದ್ದು, ಈ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ವೈರಲ್ ಸೋಂಕಿತರು ನೇತ್ರತಜ್ಞರ ಮಾರ್ಗದರ್ಶನ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News