ರಾಜ್ಯಕ್ಕೆ ಹೊರ ರಾಜ್ಯಗಳ ಝೀಕಾ ವೈರಸ್ ಪೀಡಿತರ ಭೀತಿ

Update: 2018-10-15 17:17 GMT

ಬೆಂಗಳೂರು, ಅ.15: ಹೊರ ರಾಜ್ಯಗಳಿಂದ ವೈರಸ್ ಪೀಡಿತರು ಬಂದಾಗ ಝೀಕಾ ವೈರಸ್ ಹರಡುವ ಸಾಧ್ಯತೆ ಇರುವುದರಿಂದ, ರಾಜ್ಯದಲ್ಲೂ ಅದರ ಭೀತಿ ಆವರಿಸಿದೆ.

ರಾಜಸ್ಥಾನ, ಬಿಹಾರದಲ್ಲಿ ಝೀಕಾ ವೈರಸ್‌ನಿಂದ 22ಕ್ಕೂ ಹೆಚ್ಚು ಮಂದಿ ಬಳಲುತ್ತಿದ್ದು, ವಿದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಝೀಕಾ ವೈರಸ್ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಈ ವೈರಸ್ ಪೀಡಿತ ವ್ಯಕ್ತಿಗಳು ರಾಜ್ಯಕ್ಕೆ ಬರುವುದರಿಂದ ಬೇಗ ಹರಡುವ ಸಾಧ್ಯತೆ ಇದ್ದು, ಈಗಾಗಲೇ ಎಚ್1ಎನ್1ಗೆ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ಝೀಕಾ ವೈರಸ್ ಬಗ್ಗೆಯೂ ನಿಗಾ ಇಟ್ಟಿದೆ.

ರಾಜಸ್ಥಾನ, ಬಿಹಾರ, ಜೈಪುರದಲ್ಲಿ ಈ ವೈರಸ್ ಹರಡಿದ್ದು, ದೇಶದಲ್ಲಿ ಒಟ್ಟು 89 ಜನರಿಗೆ ಈ ವೈರಸ್ ಕಾಣಿಸಿಕೊಂಡಿದೆ. ಹಾಗೂ 7ಜನರು ಝೀಕಾ ವೈರಸ್ ನಿಂದ ಬಳಲುತ್ತಿದ್ದು, ಈ ರಾಜ್ಯಗಳ ನೆರೆಹೊರೆಯ ರಾಜ್ಯಗಳಲ್ಲೂ ಕಾಣಿಸಿ ಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮುನ್ನಚ್ಚರಿಕೆ ಕ್ರಮಗಳು: ಏಡಿಸ್ ಸೊಳ್ಳೆ ಹಗಲು ಹಾಗೂ ಸಂಜೆ ಹೊತ್ತು ಕಡಿಯುವುದರಿಂದ ಈ ವೇಳೆ ಗರ್ಭಿಣಿಯರು, ಮಕ್ಕಳು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಅಲ್ಲದೆ, ದೇಹ ಪೂರ್ತಿ ಮುಚ್ಚುವ ವಸ್ತ್ರ ಧರಿಸಿ, ಸೊಳ್ಳೆಗಳ ಕಡಿತದಿಂದ ಪಾರಾಗಬಹುದು. ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ಬಾಗಿಲುಗಳನ್ನು ಮುಚ್ಚುವುದು, ಕೀಟ ನಿವಾರಕಗಳನ್ನು ಬಳಸುವುದರಿಂದ ಈ ಸೊಳ್ಳೆಯಿಂದ ಪಾರಾಗಬಹುದು.

ಬೆಳಗ್ಗಿನ ಹೊತ್ತು ಗರ್ಭಿಣಿಯರು ಅಥವಾ ಮಕ್ಕಳು ಕಡ್ಡಾಯವಾಗಿ ಸೊಳ್ಳೆ ಪರದೆಯೊಳಗೆ ಮಲಗಬೇಕು. ಹಾಗೂ ಸೋಂಕು ಇರುವ ಪ್ರದೇಶಕ್ಕೆ ಹೋಗುವಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News