​ಗಣತಿ ಆಧಾರಿತ ರಾಜ್ಯ ಸಾಧನಾ ಸಮೀಕ್ಷೆ

Update: 2018-10-16 17:32 GMT

ಬೆಂಗಳೂರು, ಅ.16: 2018-19ನೆ ಸಾಲಿನಲ್ಲಿ ರಾಜ್ಯದ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಎಲ್ಲ ಮಾಧ್ಯಮದ 4 ರಿಂದ 10ನೆ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ಸ್ವ-ಇಚ್ಛೆಯಿಂದ ಭಾಗವಹಿಸುವ 10ನೆ ತರಗತಿಯ ಅನುದಾನ ರಹಿತ ಶಾಲಾ ವಿದ್ಯಾರ್ಥಿಗಳಿಗೆ ಅ.29, 30ರಂದು ‘ಗಣತಿ ಆಧಾರಿತ ರಾಜ್ಯ ಸಾಧನ ಸಮೀಕ್ಷೆ’ ಸಂಕಲನಾತ್ಮಕ ಮೌಲ್ಯಮಾಪನ-1ನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಸಲಾಗುವುದು.

ಮೊದಲನೆ ದಿನ ಭಾಷೆ ಮತ್ತು ಎರಡನೆ ದಿನ ಕೋರ್ ವಿಷಯಗಳಿಗೆ ಸಮೀಕ್ಷೆಯನ್ನು ನಡೆಸಲಾಗುವುದು. 4 ರಿಂದ 10ನೆ ತರಗತಿಯವರೆಗೆ 53,926 ಶಾಲೆಗಳಿಂದ ಒಟ್ಟು 40.68 ಲಕ್ಷ ವಿದ್ಯಾರ್ಥಿಗಳಿಗೆ ಈ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News