‘ದಿ ವಿಲನ್’ ಹಾಡಿನ ಕುರುಡು ಪದ ತೆಗೆಯುವಂತೆ ಅಂಧ ಸಮುದಾಯ ಒತ್ತಾಯ

Update: 2018-10-16 18:29 GMT

ಬೆಂಗಳೂರು, ಅ. 16: 'ದಿ ವಿಲನ್' ಚಿತ್ರದ ಹಾಡಿನಲ್ಲಿನ ‘ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ’ ಪದ ತೆಗೆಯಬೇಕು, ಇಲ್ಲದಿದ್ದರೆ ಅ.18ರಂದು ಚಿತ್ರ ಪ್ರದರ್ಶನವಾಗುವ ಪ್ರಧಾನ ಚಿತ್ರಮಂದಿರದ ಮುಂದೆ ಪ್ರತಿಭಟಿಸುವುದಾಗಿ ಅಂಧ ಸಮುದಾಯ ತಿಳಿಸಿದೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಂಧ ಸಮುದಾಯದ ಪ್ರತಿನಿಧಿ ಎಂ.ವೀರೇಶ್ ಮಾತನಾಡಿ, ಕನ್ನಡದ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರದ ಬೋಲೋ ಬೋಲೋ ಹಾಡಿನಲ್ಲಿ ಗರುಡ್ನಂಗೆ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ ಎಂಬ ಸಾಲನ್ನು ತೆಗೆದು ಹಾಕಬೇಕು. ಹಾಗೂ ಚಲನಚಿತ್ರಗಳಲ್ಲಿ ಅಂಧತ್ವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಕೋರಿಕೆಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ವಿಕಲಚೇತನರ ಹಕ್ಕು ಕಾಯ್ದೆ ಯಾವುದೇ ವಿಕಲಚೇತನರ ನ್ಯೂನ್ಯತೆಯನ್ನು ಎತ್ತಿ ಹಿಡಿಯಬಾರದು ಎಂದು ತಿಳಿಸುತ್ತದೆ. ಅಲ್ಲದೆ, ಅಂಧರ ಭಾವನೆಗಳಿಗೆ ಧಕ್ಕೆ ಉಂಟಾದಲ್ಲಿ ಅದಕ್ಕೆ ಕಾರಣರಾದವರ ಬಗ್ಗೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲು ಸಾಧ್ಯತೆ ಇದೆಯೆಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News