‘ಸಚಿನ್ ತೆಂಡುಲ್ಕರ್ ನನ್ನ ಬಗ್ಗೆ ಹೇಳಿದಾಗ ಕಣ್ಣೀರು ಬಂತು’

Update: 2018-10-16 18:42 GMT

  ಮುಂಬೈ, ಆ.16: ಭಾರತದ ಕ್ರಿಕೆಟ್ ತಂಡದ ಮಾಜಿ ವೇಗಿ ಶಾಂತಕುಮಾರ್ ಶ್ರೀಶಾಂತ್ 2013ರಲ್ಲಿ ಐಪಿಎಲ್ ಟ್ವೆಂಟಿ-20 ಲೀಗ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾದವರು.

 ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಗ್ಗೆ ಶ್ರೀಶಾಂತ್‌ಗೆ ಅಪಾರ ಗೌರವ. ಶ್ರೀಶಾಂತ್ 2007 ಐಸಿಸಿ ಟ್ವೆಂಟಿ-20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಜಯಿಸಿದ್ದ ಭಾರತ ಕ್ರಿಕೆಟ್ ತಂಡದ ಸದಸ್ಯರು. ವಿಶ್ವಕಪ್ ಬಳಿಕ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ರಿಯಾಲಿಟಿ ಟಿವಿ ಶೋ ‘ಬಿಗ್ ಬಾಸ್’ನಲ್ಲಿ ಅವರು ಹಂಚಿಕೊಂಡಿದ್ದಾರೆ.

  2011ರ ವಿಶ್ವಕಪ್ ಮುಗಿದು ಒಂದೆರಡು ವರ್ಷಗಳ ಬಳಿಕ ನಡೆದ ಸಂದರ್ಶನವೊಂದರಲ್ಲಿ ಸಂದರ್ಶಕರು ವಿಶ್ವಕಪ್‌ನಲ್ಲಿ ಆಡಿದ ಆಟಗಾರರ ಪಾತ್ರದ ಪೈಕಿ ನನ್ನನ್ನು ಬಿಟ್ಟು ಉಳಿದ ಎಲ್ಲರ ಬಗ್ಗೆ ಹೇಳಿದ್ದರು. ಆದರೆ ಸಂದರ್ಶನ ಮುಗಿದಾಗ ಸಚಿನ್ ತೆಂಡುಲ್ಕರ್ ನನ್ನ ಹೆಸರನ್ನು ಉಲ್ಲೇಖಿಸಿದರು.‘‘ ಶ್ರೀಶಾಂತ್ ವಿಶ್ವಕಪ್‌ನಲ್ಲಿ ದೊಡ್ಡ ಕೊಡುಗೆ ನೀಡಿದ್ದರು ’’ ಎಂದು ಹೇಳಿದಾಗ ನನ್ನ ಕಣ್ಣಲ್ಲಿ ಆನಂದ ಬಾಷ್ಪ ಸುರಿಯಿತು ಎಂದು ಶ್ರೀಶಾಂತ್ ಹೇಳಿದರು.

 ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 3 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News