ಮೂಗಿ ಮಹಿಳೆ ಅತ್ಯಾಚಾರ ಆರೋಪ: ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

Update: 2018-10-17 10:53 GMT

ಪುಣೆ, ಆ.17: ಪುಣೆಯ ಆಸ್ಪತ್ರೆಯಲ್ಲಿ ತನ್ನ ಮೇಲೆ ನಾಲ್ಕು ಮಂದಿ ಸೇನಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆಂದು ಮೂಗಿ ಹಾಗೂ ಕಿವುಡಿಯಾಗಿರುವ ಮಹಿಳೆಯೊಬ್ಬಳು ಆರೋಪಿಸಿದ್ದಾರೆ. ಆಕೆಯ ಆರೋಪಕ್ಕೆ ಸಂಬಂಧಿಸಿದ ದೂರನ್ನು ರಕ್ಷಣಾ ಸಚಿವೆ ಹಾಗೂ ಸೇನಾ ಮುಖ್ಯಸ್ಥರಿಗೂ ಕಳುಹಿಸಲಾಗಿದೆ. ವಿಧವೆ ಸಂತ್ರಸ್ತೆಯ ದೂರಿನ ಆಧಾರದ ಮೇಲೆ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಆಕೆಯನ್ನು ಆರೋಪಿಗಳು ನಾಲ್ಕು ವರ್ಷಗಳ ಕಾಲ ಸತತ ಅತ್ಯಾಚಾರ ನಡೆಸಿದ್ದರೆಂದು ಆರೋಪಿಸಲಾಗಿದೆ. ತನ್ನ ಮೇಲೆ ಮೊದಲು ನಡೆದ ಅತ್ಯಾಚಾರದ ಬಗ್ಗೆ ಆಕೆ ಟೆಕ್ಸ್ಟ್ ಮೆಸೇಜ್ ಮೂಲಕ ಜವಾನನೊಬ್ಬನಿಗೆ ತಿಳಿಸಿದ್ದೇ ತಡ ಆತ ಆಕೆಗೆ ಕಿರುಕುಳ ನೀಡಲಾರಂಭಿಸಿ ಮೊದಲ ಆರೋಪಿಯ ಜತೆ ಸೇರಿದ್ದ. ಆಕೆಯನ್ನು ಬ್ಲ್ಯಾಕ್‍ ಮೇಲ್‍ ಗೊಳಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದನೆಂದು ಆರೋಪಿಸಲಾಗಿದೆ.

ಇಬ್ಬರು ಆರೋಪಿ ಸೇನಾ ಜವಾನರು ಸಂತ್ರಸ್ತೆಯ ಜತೆಗೆ ತಾವಿದ್ದಾಗ ತಮ್ಮ ಕೃತ್ಯದ ವೀಡಿಯೋ ಕೂಡ ತೆಗೆದಿದ್ದು ಅದನ್ನು ಬಳಸಿಯೂ ಆಕೆಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದರೆನ್ನಲಾಗಿದೆ. ಸಂತ್ರಸ್ತೆ ಆಸ್ಪತ್ರೆಯ ವಿವಿಧ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News