ಮಾರತಹಳ್ಳಿ: ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ; ಸೂಪರ್ ವೈಸರ್ ಸೆರೆ

Update: 2018-10-18 09:02 GMT

ಬೆಂಗಳೂರು, ಅ.18: ಮಹಿಳಾ‌ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ  ಸೂಪರ್​ವೈಸರ್​ ಓರ್ವ ನನ್ನು ಇಲ್ಲಿನ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಮೋಹನ್ ಬಾಬು (30) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ, ಮಾರತಹಳ್ಳಿಯ ಔಟರ್ ರಿಂಗ್​ ರಸ್ತೆ ಬಳಿಯ ಖಾಸಗಿ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ‌ ಮಾಡುತ್ತಿದ್ದ. ಆರೋಪಿಯು ಮಹಿಳೆಯನ್ನು ಶೌಚಾಲಯ ಸ್ವಚ್ಛಗೊಳಿಸಲು ಕಳುಹಿಸಿ ಈ ವೇಳೆ  ಅತ್ಯಾಚಾರವೆಸಗಿದ್ದ ಎಂದು ದೂರಲಾಗಿತ್ತು.

ಈ ಕುರಿತು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News