ಬೆಂಗಳೂರು: ಹಾಲು ಮಾರಾಟ ನೆಪದಲ್ಲಿ ಕಳವು; ಬರೋಬ್ಬರಿ ಒಂದು ಕೆಜಿ ಚಿನ್ನಾಭರಣ ವಶ

Update: 2018-10-18 10:59 GMT

ಬೆಂಗಳೂರು, ಅ.18: ಹಾಲು ಮಾರಾಟ ಮಾಡುವ ನೆಪದಲ್ಲಿ ಮನೆ ಮಾಲಕರ ವಿಶ್ವಾಸ ಗಳಿಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಸಂಜಯನಗರ ಠಾಣೆ ಪೊಲೀಸರು ಆತನಿಂದ 45 ಲಕ್ಷ ರೂ. ಮೌಲ್ಯದ 1 ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಗಾಝಿಯಾಬಾದ್‍ನ ಮುರಾದ್‍ನಗರದ ನಿವಾಸಿ ಮೀನು ಅಲಿಯಾಸ್ ಚಾಚಾಜಿ (51) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜಯನಗರ ನಿವಾಸಿ ಅನಿಲ್ ಎಂಬವರು ಆ.13ರಂದು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮನೆಯ ಬಾಗಿಲಿಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಅದೇ ದಿನ ರಾತ್ರಿ 10:30ಕ್ಕೆ ವಾಪಸಾದಾಗ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. 

ಈ ಸಂಬಂಧ ಜೆಸಿ ನಗರ ಉಪವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಸಂಜಯನಗರ ಇನ್ ಸ್ಪೆಕ್ಟರ್ ಪ್ರಶಾಂತ್ ಆರ್. ವರ್ಣಿ ಮತ್ತವರ ಸಿಬ್ಬಂದಿ ಆರೋಪಿ ಚಾಚಾಜಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News