ಬಿಬಿಎಂಪಿ ವ್ಯಾಪ್ತಿಯಲ್ಲಿ ಉಚಿತ ವೈ-ಫೈ ಸೌಲಭ್ಯ

Update: 2018-10-19 17:59 GMT

ಬೆಂಗಳೂರು, ಅ. 19: ಬಿಬಿಎಂಪಿ ವ್ಯಾಪ್ತಿಯ 5,938 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿದ್ದು, ಒಂದು ತಿಂಗಳಿನಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಸೌಲಭ್ಯ ನೀಡುವ ಕಂಪನಿಗಳು ಪಾವತಿ ಮಾಡಬೇಕಿರುವ ಶುಲ್ಕದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಇಂಡಸ್ ಟವರ್, ಎಸಿಟಿ, ಡಿವಿಒಐಎಸ್ ಹಾಗೂ ಹನಿಕೋಂಬ್ ಕಂಪನಿಗಳ ಜೊತೆ ಉಚಿತ ವೈ-ಫೈ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆದಿದೆ. ಬಿಬಿಎಂಪಿ ಗುರುತಿಸಿದ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

ವೈ-ಫೈ ಸೌಲಭ್ಯ ಒದಗಿಸುತ್ತಿರುವ ತಮಗೆ ವಿಧಿಸುತ್ತಿರುವ ಶುಲ್ಕ ಹೆಚ್ಚಾಗಿದೆ ಎಂದು ಕಂಪನಿಗಳು ಹೇಳಿವೆ. 2ಚದರ ಅಡಿ ಜಾಗದಲ್ಲಿ ವೈ-ಫೈ ಬಾಕ್ಸ್ ಅಳವಡಿಸಲಾಗುತ್ತದೆ. ಇದಕ್ಕಾಗಿ 62,000 ರೂ. ಸಾಧನ ಮತ್ತು ಶೇ.18ರಷ್ಟು ಜಿಎಸ್‌ಟಿಯನ್ನು ಪಾವತಿ ಮಾಡಬೇಕು.

ಇಂಡಸ್ ಕಂಪನಿ 60 ಕಡೆ ವೈ-ಫೈ ಬಾಕ್ಸ್ ಅಳವಡಿಕೆ ಮಾಡಿದೆ. ಆದರೆ, ನಿವಾಸಿಗಳು ಬಾಕ್ಸ್ ಅಳವಡಿಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಬಿಬಿಎಂಪಿಯೇ 198 ವಾರ್ಡ್‌ಗಳಲ್ಲೂ ಸ್ಥಳ ಗುರುತಿಸಬೇಕು ಎಂದು ಕಂಪನಿಗಳು ಹೇಳಿವೆ.

30 ನಿಮಿಷ ಉಚಿತ: 5,938 ಸ್ಥಳಗಳಲ್ಲಿ ನೀಡುವ ವೈ-ಫೈ ಸೌಲಭ್ಯ ಮೊದಲ 30 ನಿಮಿಷ ಉಚಿತವಾಗಿರುತ್ತದೆ. ಬಳಿಕ ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News