ಅ.20ರ ನಂತರ ಹಿಂಗಾರು ಮಳೆ ಆರಂಭ ಸಾಧ್ಯತೆ

Update: 2018-10-19 18:03 GMT

ಬೆಂಗಳೂರು, ಅ. 19: ಮುಂಗಾರು ಮಳೆ ಇಳಿಮುಖವಾಗುವ ಮುನ್ಸೂಚನೆ ಗಳಿದ್ದು, ಅ.20ರ ನಂತರ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಮುಂಗಾರಿನಂತೆ ಹಿಂಗಾರಿನಲ್ಲಿ ಧೀರ್ಘ ಕಾಲದ ಹವಾ ಮುನ್ಸೂಚನೆ ನೀಡುವುದು ಕಷ್ಟ. ವಾಯುಭಾರ ಕುಸಿತ, ಮೇಲ್ಮೈ ಸುಳಿ ಗಾಳಿ, ಚಂಡಮಾರುತದಂತಹ ಸನ್ನಿವೇಶಗಳು ವಾತಾವರಣದಲ್ಲಿ ಸೃಷ್ಟಿಯಾದಾಗ ಮಾತ್ರ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಇಲ್ಲದಿದ್ದರೆ ಮಳೆಯ ಪ್ರಮಾಣ ವಿರಳವಾಗಿರುತ್ತದೆ ಎಂದು ಹೇಳಿದರು.

ಮುಂಗಾರು ಮಾರುತಗಳು ಮರಳಿದ ನಂತರ ಹಿಂಗಾರು ಮಾರುತಗಳು ಆರಂಭವಾಗುತ್ತವೆ. ಮುಂಗಾರಿನ ಮಾರುತಗಳು ಇನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯದಿಂದ ವಾಪಸ್ಸಾಗಿಲ್ಲ. ಈಗಲೂ ಬೀಳುತ್ತಿರುವ ಮಳೆ ಮುಂಗಾರು ಮಳೆಯೆಂದೇ ಪರಿಗಣಿತವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News