ಭಾರತದ ವೇಗದ ಬೌಲರ್ ಪ್ರವೀಣ್‌ ಕುಮಾರ್ ಕ್ರಿಕೆಟ್ ನಿಂದ ನಿವೃತ್ತಿ

Update: 2018-10-20 05:57 GMT

ಮುಂಬೈ, ಅ.20: ಭಾರತದ ವೇಗದ ಬೌಲರ್ ಪ್ರವೀಣ್‌ ಕುಮಾರ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

 ಮೀರತ್‌ನ ವೇಗದ ಬೌಲರ್ ಪ್ರವೀಣ್ ಸುಮಾರು 11 ವರ್ಷಗಳ ಕಾಲ ಎಲ್ಲ ಮಾದರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದರು. ಇದೀಗ ಒಎನ್‌ಜಿಸಿ ಸಂಸ್ಥೆ ಪರ ಮಾತ್ರ ಕ್ರಿಕೆಟ್ ಆಡಲಿದ್ದಾರೆ. ಮುಂದೊಂದು ದಿನ ಬೌಲಿಂಗ್ ಕೋಚ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ.

 ಪ್ರವೀಣ್ ಭಾರತಕ್ಕೆ ಹಲವು ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. 2011ರಲ್ಲಿ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ 106ರನ್‌ಗೆ 5 ವಿಕೆಟ್ ಪಡೆದು ಸ್ಮರಣೀಯ ಇನಿಂಗ್ಸ್ ಆಡಿದ್ದರು. ಲಾರ್ಡ್ಸ್ ಕ್ರಿಕೆಟ್ ಮೈದಾನದ ಗೌರವ ಮಂಡಳಿಯಲ್ಲಿ ಸ್ಥಾನ ಪಡೆದ ಭಾರತದ 18ನೇ ಕ್ರಿಕೆಟಿಗ ಎನಿಸಿಕೊಂಡಿದ್ದರು.

ಪ್ರವೀಣ್ ಭಾರತದ ಪರ 68 ಏಕದಿನ ಹಾಗೂ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 77 ಹಾಗೂ 27 ವಿಕೆಟ್‌ಗಳನ್ನು ಪಡೆದಿದ್ದಾರೆ. 2012ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಕೊನೆಯ ಬಾರಿ ಭಾರತದ ಪರ ಆಡಿದ್ದರು. ಗಾಯದ ಸಮಸ್ಯೆಯಿಂದಾಗಿ 2011ರ ವಿಶ್ವಕಪ್‌ನಿಂದ ಕೊನೆಯಕ್ಷಣದಲ್ಲಿ ಹೊರಗುಳಿದಿದ್ದರು.

 ‘‘ನನಗೆ ನಿವೃತ್ತಿಯಾಗುವುದರಿಂದ ಬೇಸರವಿಲ್ಲ. ಹೃದಯ ತುಂಬಿ ಬೌಲಿಂಗ್ ಮಾಡಿದ್ದೆ. ಉತ್ತರಪ್ರದೇಶದಲ್ಲಿ ಉತ್ತಮ ಬೌಲರ್‌ಗಳು ಮಿಂಚಲು ಕಾಯುತ್ತಿದ್ದಾರೆ. ನನ್ನಿಂದಾಗಿ ಅವರ ವೃತ್ತಿಜೀವನದ ಮೇಲೆ ಪರಿಣಾಮಬೀರುವುದನು ್ನಬಯಸಲಾರೆ. ನನ್ನ ಸಮಯ ಮುಗಿದಿದೆ. ಇದನ್ನು ನಾನು ಒಪ್ಪಿಕೊಳ್ಳುವೆ. ಈ ಅವಕಾಶವನ್ನು ನೀಡಿದ ಭಗವಂತನಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News