ಇಂದು ಹಲವು ರೈಲುಗಳ ಸಂಚಾರ ರದ್ದು, ವ್ಯತ್ಯಯ

Update: 2018-10-20 15:04 GMT

ತಿರುವನಂತಪುರಂ, ಅ.20: ಹಳಿ ವಿಸ್ತರಣೆಗೆ ಸಂಬಂಧಿಸಿ ಶನಿವಾರ ರೈಲು ಸಂಚಾರದಲ್ಲಿ ನಿಯಂತ್ರಣ ಹೇರಲಾಗಿದೆ  ಎಂದು ರೈಲ್ವೆ ಪ್ರಕಟನೆ ತಿಳಿಸಿದೆ. ಆರು ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದಾಗಿವೆ. ಮೂರು ರೈಲುಗಳನ್ನು ಆಲಪ್ಪುಝ ರೂಟ್‍ನಲ್ಲಿ ಸಂಚರಿಸುವಂತೆ ಮಾಡಲಾಗಿದೆ.

 ಕನ್ಯಾಕುಮಾರಿ- ಮುಂಬೈ ಜಯಂತಿ ಜನತಾ(16382) ಕೊಟ್ಟಾಯಂ ವಿಭಾಗದಲ್ಲಿ ಒಂದು ಗಂಟೆ ಹತ್ತು ನಿಮಿಷ ತಡವಾಗಿ ಸಂಚಾರ ಮುಂದುವರಿಸಲಿದೆ. ರೈಲುಗಳನ್ನು ಆಲಪ್ಪುಝ ರೂಟ್‍ನಲ್ಲಿ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಹರಿಪ್ಪಾಡ್, ಅಂಬಲಪ್ಪುಝ, ಚೆರ್ತಲ ರೈಲ್ವೆ ನಿಲ್ದಾಣದಲ್ಲಿ ರೈಲುಗಳಿಗೆ ಒಂದು ನಿಮಿಷದ ನಿಲುಗಡೆ ಸಿಗಲಿದೆ.

ಸಂಪೂರ್ಣ ರದ್ದಾದ ರೈಲುಗಳು:

►ಎರ್ನಾಕುಳಂ-ಕಾಯಂಕುಳಂ ಪ್ಯಾಸೆಂಜರ್(56381)

►ಕಾಯಂಕುಳಂ-ಎರ್ನಾಕುಳಂ ಪ್ಯಾಸೆಂಜರ್(56382)

►ಎರ್ನಾಕುಳಂ-ಕೊಲ್ಲಂ ಮೆಮು(66307)

► ಕೊಲ್ಲಂ-ಎರ್ನಾಕುಳಂ ಮೆಮು(66308)

►ಎರ್ನಾಕುಳಂ -ಕಾಯಂಕುಳಂ ಪ್ಯಾಸೆಂಜರ್(56387)

►ಕಾಯಂಕುಳಂ-ಎರ್ನಾಕುಳಂ(56388)

 ಆಲಪ್ಪುಝ ಮೂಲಕ ಹಾದುಹೋಗುವ ರೈಲುಗಳು

► ತಿರುವನಂತಪುರಂ-ಹೈದರಾಬಾದ್ ಶಬರಿ ಎಕ್ಸ್‍ಪ್ರೆಸ್(17229)

►ಕಣ್ಣೂರು -ತಿರುವನಂಪುರಂ ಜನಶತಾಬ್ದಿ(12081)

► ಹೊಸದಿಲ್ಲಿ-ತಿರುವನಂತಪುರಂ ಕೇರಳ ಎಕ್ಸ್‍ಪ್ರೆಸ್(12626)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News