ಅಮೃತಸರದಲ್ಲಿ ರೈಲು ದುರಂತ ; ಮ್ಯಾಜಿಸ್ಟೀರಿಯಲ್ ತನಿಖೆಗೆ ಸಿಎಂ ಆದೇಶ

Update: 2018-10-20 08:36 GMT

ಅಮೃತಸರ ಅ.20:  ದಸರಾ ಅಂಗವಾಗಿ ಅಮೃತಸರದ  ಜೊಡಾ ಫಾಟಕ್ ನಲ್ಲಿ  ನಡೆಯುತ್ತಿದ್ದ ರಾವಣ ದಹನ ವೀಕ್ಷಿಸುತ್ತಿದ್ದ ಜನರ ಮೇಲೆ  ಶುಕ್ರವಾರ ರೈಲು ಹರಿದು ಮೃತಪಟ್ಟವರ ಸಂಖ್ಯೆ  61ಕ್ಕೆ ಏರಿದ್ದು,  70  ಮಂದಿ  ಗಾಯಗೊಂಡಿದ್ದಾರೆ. ಈ  ಘಟನೆಗೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಮುಖ್ಯ ಮಂತ್ರಿ ಅಮರೀಂದರ್ ಸಿಂಗ್ ಆದೇಶ ನೀಡಿದ್ದಾರೆ.

ಪೊಲೀಸ್ ಆಯುಕ್ತರು ತನಿಖೆ ನಡೆಸಿ 4 ವಾರಗಳಲ್ಲಿ ವರದಿ ನೀಡಲಿದ್ದಾರೆ ಎಂದು ಸಿಎಂ ಅಮರೀಂದರ್  ಸಿಂಗ್ ತಿಳಿಸಿದ್ದಾರೆ.

ದುರಂತದಲ್ಲಿ ಮೃತಪಟ್ಟ ಜನರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ. ಗಾಯಗೊಂಡಿರುವವರಿಗೆ ಸರಕಾರಿ  ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸಂತೃಸ್ಥರ ಕುಟುಂಬಕ್ಕೆ ನೆರವಾಗಲು 3 ಕೋಟಿ ರೂ. ಬಿಡುಗಡೆಗೊಳಿಸುವಂತೆ ಅಮೃತಸರದ ಜಿಲ್ಲಾಧಿಕಾರಿಗೆ ಸಿಎಂ  ಆದೇಶ ನೀಡಿದ್ದಾರೆ,  ದುರಂತದ ಹಿನ್ನೆಲೆಯಲ್ಲಿ 37 ರೈಲುಗಳ ಓಡಾಟವನ್ನು ರದ್ದುಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News