ಬೆಂಗಳೂರು: ಮಾದಕ ವಸ್ತು ಮಾರಾಟ-ವ್ಯಸನಿಗಳ ವಿರುದ್ಧ ಜಾಗೃತಿ ಮೂಡಿಸುವ ಸಿಡಿ ಬಿಡುಗಡೆ

Update: 2018-10-20 16:44 GMT

ಬೆಂಗಳೂರು, ಅ.20: ಮಾದಕ ವಸ್ತುಗಳ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ನಡೆಸುತ್ತಿರುವ ನಗರ ಪೊಲೀಸರು, ಮಾದಕ ವಸ್ತು ಮಾರಾಟ- ವ್ಯಸನಿಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಡಿಯೋ ಸಿಡಿಯನ್ನು ಲೋಕಾರ್ಪಣೆ ಮಾಡಿದರು.

ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಟಿ.ಸುನೀಲ್ ಕುಮಾರ್, ಗೀತೆಯ ಹಾಡುಗಾರ ಬೈಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಸುಬ್ರಹ್ಮಣಿ ಹಾಗೂ ಬರಹಗಾರ ಹೇಮಂತ್ ತಂಡಕ್ಕೆ 25 ಸಾವಿರ ಬಹುಮಾನ ಘೋಷಿಸಿದರು.

ಮಾದಕ ವಸ್ತು ತಡೆಗಟ್ಟಲು ಬೆಂಗಳೂರು ನಗರ ಪೊಲೀಸರು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ಇದೀಗ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ‘ಸೇ ನೋ ಟು ಡ್ರಗ್ಸ್’ ಎಂಬ ಹೆಸರಿನಲ್ಲಿ ಗೀತೆಯನ್ನು ರಚಿಸಿದ್ದಾರೆ. ಮಾದಕ ವಸ್ತು ತ್ಯಜಿಸೋಣ ಯುವ ಪೀಳಿಗೆ ಉಳಿಸೋಣ, ಅದೇ ರೀತಿ, ಸಹಾಯವಾಣಿ ಹಾಗೂ ದೂರು ನೀಡಲು 1908ಗೆ ಸಂಖ್ಯೆಗೆ ಸಂಪರ್ಕಿಸೋಣ. ಗಲ್ಲಿ ಗಲ್ಲಿ ತಳ್ಳೊ ಗಾಡಿಯಲ್ಲಿ ಪೆಟ್ಟಿ ಅಂಗಡಿಯಲ್ಲಿ ಮಾರುವವರು, ನಾವೆಲ್ಲ ಒಂದಾಗೋಣ ಒಂದಾಗಿ ಹೋರಾಡೊಣ ಎನ್ನುವ ಹಾಡಿನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿಗಳಾದ ಅನುಚೇತ್, ರಾಹುಲ್‌ಕುಮಾರ್, ಶಹಪುರ ವಾಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News