ಇಂಗ್ಲೆಂಡ್‌ಗೆ ಏಕದಿನ ಸರಣಿ ಜಯ

Update: 2018-10-20 18:48 GMT

ಕೊಲಂಬೊ, ಅ.20: ಮಳೆಬಾಧಿತ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 18 ರನ್‌ಗಳ ಜಯ ಗಳಿಸಿದೆ.

ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 273 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ನಿರೋಶನ್ ಡಿಕ್ವೇಲ್ಲಾ (52) ಮತ್ತು ದಾಸುನ್ ಶನಕ (66) ಅರ್ಧಶತಕ ನೆರವಿನಲ್ಲಿ ಶ್ರೀಲಂಕಾ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಗೆಲುವಿಗೆ 274 ರನ್‌ಗಳ ಸವಾಲು ಪಡೆದ ಇಂಗ್ಲೆಂಡ್ 27 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 132 ರನ್ ಗಳಿಸುವಷ್ಟರಲ್ಲಿ ಮಳೆ ಸುರಿಯಿತು. ಅಷ್ಟು ಹೊತ್ತಿಗೆ ಇಂಗ್ಲೆಂಡ್ ಮೇಲುಗೈ ಪಡೆದಿತ್ತು. ಡಕ್‌ವರ್ಥ್ ಲೂಯಿಸ್ ನಿಯಮದಂತೆ ಇಂಗ್ಲೆಂಡ್ ಜಯ ಸಾಧಿಸಿತು, ಜೇಸನ್ ರಾಯ್ 45 ರನ್, ಜೋ ರೂಟ್ ಔಟಾಗದೆ 32ರನ್ ಮತ್ತು ಇಯಾನ್ ಮೊರ್ಗನ್ ಔಟಾಗದೆ 32 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News