ಅರ್ಜುನ್ ಸರ್ಜಾ ವಿರುದ್ಧದ ಆರೋಪ ಒಪ್ಪಲು ಸಾಧ್ಯವಿಲ್ಲ: ನಟಿ ತಾರಾ

Update: 2018-10-21 15:08 GMT

ಬೆಂಗಳೂರು, ಅ.21: ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪವನ್ನು ಒಪ್ಪಲು ವಿಧಾನ ಪರಿಷತ್ ಸದಸ್ಯೆ, ನಟಿ ತಾರಾ ನಿರಾಕರಿಸಿದ್ದಾರೆ. 

ಅರ್ಜುನ್ ಸರ್ಜಾ ಅವರು ಏನು ಎನ್ನುವುದು ನನಗೆ ಗೊತ್ತು. ಅವರ ಜತೆ ಪ್ರೇಮಾಗ್ನಿ ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ತುಂಬ ಒಳ್ಳೆಯ, ಸಭ್ಯ ಮನುಷ್ಯ, ಮೊದಲು ಹೀಗೆಲ್ಲ ಇರಲಿಲ್ಲ. ನಾವು ಸಂಬಂಧಗಳಿಗೆ ಬೆಲೆ ಕೊಡುತ್ತಿದ್ದೆವು. ನಾನಂತೂ ಹಲವು ಅತ್ಯಾಚಾರದ ದೃಶ್ಯಗಳಲ್ಲಿ ನಟಿಸಿದ್ದೇನೆ. ಒಂದು ದಿನವೂ ಕೆಟ್ಟ ಅನುಭವ ಆಗಿಲ್ಲ ಎಂದರು. ನನಗೆ ಶ್ರುತಿ ಹರಿಹರನ್ ಬಗ್ಗೆ ಗೊತ್ತಿಲ್ಲ. ಅವರ ಜತೆ ನಟಿಸಿಯೂ ಇಲ್ಲ. ಮೀ ಟೂ ಒಂದು ಒಳ್ಳೆಯ ಅಭಿಯಾನ. ಅದನ್ನು ಸರಿಯಾಗಿ ಬಸಿಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News