ಮೋದಿ ಪ್ರಧಾನಿಯಾಗಿದ್ದು ಅದೃಷ್ಟದಿಂದಲ್ಲ, ತಮ್ಮ ಪರಿಶ್ರಮದಿಂದ: ಸಿ.ಟಿ.ರವಿ

Update: 2018-10-21 16:41 GMT

ಬೆಂಗಳೂರು, ಅ.20: ನರೇಂದ್ರ ಮೋದಿ ದೇಶದ ಪ್ರಧಾನಿ ಹುದ್ದೆಗೇರಿದ್ದು ಯಾವುದೇ ಅದೃಷ್ಟದ ಪರಿಣಾಮವಲ್ಲ, ವಂಶಪಾರಂಪರ್ಯವಾಗಿ ಅಲ್ಲ, ಬದಲಾಗಿ ತಮ್ಮ ಪರಿಶ್ರಮದಿಂದ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. 

ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರಧರ್ಮ ಸಂಘಟನೆ ಆಯೋಜಿಸಿದ್ದ ‘ಮೋದಿ ಮತ್ತೊಮ್ಮೆ ವಿಡಿಯೋ ಹಾಡಿನ ಸಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಕೇವಲ ಡಿಎನ್‌ಎ ಮಾತ್ರವೇ ಹಲವರನ್ನು ಪ್ರಧಾನಿ ಹುದ್ದೇಗೇರಿಸಿದೆ. ಕೆಲವರು ಹಣಬಲ, ಜಾತಿ ಬಲ ಹಾಗೂ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯ ಪರಿಣಾಮವಾಗಿ ದೇಶದ ಪ್ರಧಾನಿ ಹುದ್ದೇಗೇರುತ್ತಾರೆ ಎಂದು ಅವರು ಹೇಳಿದರು.

ದೇಶದ ಬಗ್ಗ ಅಪಾರ ಕನಸುಗಳನ್ನು ಹೊಂದಿರುವ ನರೇಂದ್ರ ಮೋದಿಯ ಸಾಧನೆಗಳನ್ನು ಪ್ರಸ್ತುತ ಪಡಿಸುವ ಇಂತಹ ವಿಡಿಯೋವನ್ನು ರಾಷ್ಟ್ರ ಧರ್ಮ ಸಂಸ್ಥೆಯ ಸಂತೋಷ್ ಕೆಂಚಾಂಬ ಹೊರತಂದಿರುವುದು ಬಹಳ ಸಂತಸದ ವಿಷಯ. ಇಂತಹ ಕನಸುಗಳನ್ನು ಹೊಂದಿರುವ ಪ್ರಧಾನಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ ಮಾತನಾಡಿ, ಸರ್ಜಿಕಲ್ ಸ್ಟ್ರೈಕ್, ಫಸಲ್ ಬಿಮಾ ಯೋಜನೆ, ಮೇಕ್ ಇನ್ ಇಂಡಿಯಾ, ಜನಧನ ಯೋಜನೆ, ಯೂರಿಯಾ ಲೇಪಿತ ರಸಗೊಬ್ಬರ ವಿತರಣೆ ಹೀಗೆ ಹತ್ತು ಹಲವು ಕ್ರಾಂತಿಕಾರಿ ಯೋಜನೆಗಳ ಹರಿಕಾರ ಪ್ರಧಾನಿ ನರೇಂದ್ರ ಮೋದಿ. ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ 4 ವರ್ಷಗಳಿಂದ ದೇಶದ ಜನಸಾಮಾನ್ಯರ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನು ಜನಸಾಮಾನ್ಯರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಕಾಶ್ ಬೆಳವಾಡಿ, ಎಬಿಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರಿ, ಸಮಾಜ ಸುಧಾರಕ ಶಕುಂತಲಾ ಅಯ್ಯರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News