ಗಾಂಧೀಜಿ ಚಿಂತನೆಗಳು ಸರ್ವಕಾಲಕ್ಕೂ ಅಗತ್ಯ: ಡಾ.ತ್ಯಾಗರಾಜ್

Update: 2018-10-21 16:43 GMT

ಬೆಂಗಳೂರು, ಅ.21: ಮಹಾತ್ಮಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಪರವಾದ ಚಿಂತನೆಗಳು ಸರ್ವಕಾಲಕ್ಕೂ, ಒಂದು ಮುನ್ನೋಟವನ್ನು ಒದಗಿಸುತ್ತದೆ ಎಂದು ವಿಮರ್ಶಕ ಹಾಗೂ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ತ್ಯಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಘಟಕದ ವತಿಯಿಂದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ ‘ಗ್ರಾಮೀಣಾಭಿವೃದ್ಧಿಯಲ್ಲಿ ಗಾಂಧಿ ಚಿಂತನೆಗಳ ಪ್ರಸ್ತುತತೆ’ ಕುರಿತು ಒಂದು ದಿನದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.

ಮುಖ್ಯ ತೀರ್ಪುಗಾರರಾಗಿ ಆಗಮಿಸಿದ್ದ ಆಂಗ್ಲ ವಿಭಾಗದ ಮುಖ್ಯಸ್ಥೆ ಪ್ರೊ.ಕಲ್ಪನಾ ಮಾತನಾಡಿ, ಕಾಲೇಝು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸೇವಾಭಾವನೆ ಬೆಳೆಸಲು ಗಾಂಧಿ ಚಿಂತನೆಗಳು ಸದಾ ಸ್ಪೂರ್ತಿ ಎಂದರು.

ಅಂತರ್ಜಾಲದ ಕುರುಡು ಮೋಹ, ಜಾಗತೀಕರಣದ ಆಕರ್ಷಣೆ ಹೆಚ್ಚುತ್ತಿದ್ದು, ನೈತಿಕತೆ ಕುಸಿಯುತ್ತಿರುವ ಇವತ್ತಿನ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಜಾಗೃತಿಯನ್ನು ಮೂಡಿಸುವಲ್ಲಿ ಸಾರ್ಥಕ, ಮಾರ್ಗದರ್ಶನ ಮಾಡುತ್ತವೆ ಎಂದು ಎನ್ನೆಸ್ಸೆಸ್‌ನ ಕಾರ್ಯಕ್ರಮಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರೊ.ವಿಜಯ, ರೆಡ್‌ಕ್ರಾಸ್‌ನ ಡಾ.ನಾರಾಯಣ, ಪ್ರೊ.ರಾಜಣ್ಣ, ಪ್ರೊ.ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News