ಧೋನಿಯಿಂದ ಏಕದಿನ ಕ್ಯಾಪ್ ಪಡೆದ ಪಂತ್

Update: 2018-10-21 18:30 GMT

ಗುವಾಹತಿ, ಅ.21: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೆ ಮೊದಲು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದ ಏಕದಿನ ಕ್ರಿಕೆಟ್ ಕ್ಯಾಪ್‌ನ್ನು ಸ್ವೀಕರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟರು.

   ಧೋನಿ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯಲ್ಲಿ ರನ್ ಗಳಿಸಲು ಪರದಾಟ ನಡೆಸಿದಾಗ ಏಶ್ಯಕಪ್‌ನಲ್ಲಿ ಪಂತ್‌ಗೆ ಅವಕಾಶ ನೀಡಲಾಯಿತು. ಮಧ್ಯಮ ಕ್ರಮಾಂಕದ ಸಮಸ್ಯೆ ನಿವಾರಿಸಿಕೊಳ್ಳಲು ಪಂತ್‌ಗೆ ಮಣೆ ಹಾಕಲಾಗಿತ್ತು. 21ರ ಹರೆಯದ ದಿಲ್ಲಿ ದಾಂಡಿಗ ಪಂತ್ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2 ಇನಿಂಗ್ಸ್ ಗಳಲ್ಲಿ ಒಟ್ಟು 184 ರನ್ ಗಳಿಸಿ ಗಮನಸೆಳೆದಿದ್ದಾರೆ. ಎಡಗೈ ದಾಂಡಿಗ ಉತ್ತಮ ಸ್ಟ್ರೈಕ್‌ರೇಟ್(84) ಕಾಯ್ದುಕೊಂಡಿದ್ದಾರೆ. ಇದು ಸರಣಿಯಲ್ಲಿ ಎರಡನೇ ಉತ್ತಮ ಸ್ಟ್ರೈಕ್‌ರೇಟ್ ಆಗಿತ್ತು. ಭಾರತ ಮೂವರು ವೇಗಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ ಕಾರಣ ಖಲೀಲ್ ಅಹ್ಮದ್‌ಗೆ ಮೊದಲ ಅವಕಾಶ ನೀಡಿದೆ. ಅಹ್ಮದ್ ಅವರು ಮುಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್‌ರೊಂದಿಗೆ ವೇಗದ ವಿಭಾಗವನ್ನು ಮುನ್ನಡೆಸಿದ್ದಾರೆ. ಯಜುವೇಂದ್ರ ಚಹಾಲ್ ಹಾಗೂ ರವೀಂದ್ರ ಜಡೇಜ ಸ್ಪಿನ್ ದಾಳಿ ಮುನ್ನಡೆಸಿದ್ದಾರೆ.

ವೆಸ್ಟ್‌ಇಂಡೀಸ್ ತಂಡ ಚಂದ್ರಪಾಲ್ ಹೇಮರಾಮ್ ಹಾಗೂ ಒಶಾನೆ ಥಾಮಸ್‌ಗೆ ಚೊಚ್ಚಲ ಏಕದಿನ ಪಂದ್ಯವನ್ನಾಡಲು ಅವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News