ಆನ್‌ಲೈನ್ ಮದ್ಯ ಮಾರಾಟ ಬೇಡ

Update: 2018-10-21 18:32 GMT

ಮಾನ್ಯರೇ,

ಮಹಾರಾಷ್ಟ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಜಾಲತಾಣಗಳ ಮೂಲಕ ಮದ್ಯ ಮಾರಾಟ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಹಾಲಿ ಇರುವ ಅಬಕಾರಿ ಕಾಯ್ದೆಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ತರುವ ಸಾಧ್ಯತೆ ಇದೆ. ಒಂದು ವೇಳೆ ಕಾಯ್ದೆ ತಿದ್ದುಪಡಿಯಾದಲ್ಲಿ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈಗಾಗಲೇ ರಾಜ್ಯದಲ್ಲಿ ಬಹಳಷ್ಟು ಸಂಸಾರಗಳು ಬೀದಿಗೆ ಬಿದ್ದಿವೆ. ಈ ಕಾಯ್ದೆ ಜಾರಿಗೆ ತರುವುದು ಬೇಡ. ರೈತರ ಸಾಲ ಮನ್ನಾ ಮಾಡಿರುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರೀ ಹೊಡೆತ ಬಿದ್ದಿದೆ. ಇದನ್ನು ಸರಿದೂಗಿಸಲು ರಾಜ್ಯದಲ್ಲೂ ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಸರಕಾರ ಮುಂದಾಗಿದೆ. ಇದು ಖಂಡನೀಯ.

Writer - ರವಿಕುಮಾರ ಮಠಪತಿ, ವಡಗಾಂವ

contributor

Editor - ರವಿಕುಮಾರ ಮಠಪತಿ, ವಡಗಾಂವ

contributor

Similar News