ಬೆಲಿಹು ಚಾಂಪಿಯನ್

Update: 2018-10-21 18:34 GMT

ಹೊಸದಿಲ್ಲಿ, ಅ.21: ರಾಷ್ಟ್ರರಾಜ ಧಾನಿಯಲ್ಲಿ ರವಿವಾರ ನಡೆದ ದಿಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಇಥಿಯೋಪಿಯದ ಅಮಾಲಕ್ ಬೆಲಿಹು ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

 ಬೆಲಿಹು 59.18 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ವಾಲೆಗನ್(59.22)ಬೆಳ್ಳಿ ಹಾಗೂ ಕೀನ್ಯದ ಡೇನಿಯಲ್ ಕಿಪ್‌ಚುಂಬಾ(59.48)ಮೂರನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಸೆಹಾಯ್ ಗೆಮೆಚು(1:06.50) ಮೊದಲ ಸ್ಥಾನ ಪಡೆಯುವುದರ ಜೊತೆಗೆ 2009ರಲ್ಲಿ ಕೀನ್ಯದ ಮೇರಿ ಕೆಟಾನಿ ನಿರ್ಮಿಸಿದ್ದ ದಾಖಲೆ(1:06.54)ಯನ್ನು ಮುರಿದರು. ಜೊಯ್‌ಸಿಲಿನ್ ಜೆಪ್‌ಕೊಸ್ಗೆ(1:06.56)ಬೆಳ್ಳಿ ಹಾಗೂ ಇಥಿಯೋಪಿಯದ ಝೆನೆಬಾ ಯಿಮೆರ್(1:06.59)ಕಂಚು ಜಯಿಸಿದರು.

ಅಭಿಷೇಕ್ ಪಾಲ್ ಭಾರತದ ಪುರುಷರ ವಿಭಾಗದ ರೇಸ್‌ನ್ನು 1:4.14 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಅವಿನಾಶ್ ಸಬ್ಲೆ(1:04:14) ಹಾಗೂ ಗೋಪಿ ಟಿ.(1:04:15)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News