ಬಿಸಿಸಿಐ ಯುಎಇ ಘಟಕದ ಪೋಷಕರಾಗಿ ಡಾ.ತುಂಬೆ ಮೊಯ್ದಿನ್, ಅಧ್ಯಕ್ಷರಾಗಿ ಎಸ್.ಎಂ. ಬಶೀರ್ ಆಯ್ಕೆ

Update: 2018-10-22 16:31 GMT
ಡಾ.ತುಂಬೆ ಮೊಯ್ದಿನ್ ,                           ಎಸ್.ಎಂ. ಬಶೀರ್ 

ದುಬೈ, ಅ.22: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮಂಗಳೂರು ಇದರ ಯುಎಇ ಘಟಕದ ಉದ್ಘಾಟನೆ ಇತ್ತೀಚೆಗೆ ದುಬೈ ಜೆ.ಡಬ್ಲ್ಯು. ಮೆರೆಟ್ ಹೊಟೇಲ್ ನಲ್ಲಿ ನಡೆಯಿತು.

ಬಿಸಿಸಿಐ ಮಂಗಳೂರಿನ ಪಧಾಧಿಕಾರಿಗಳು, ಟ್ರಸ್ಟಿಗಳು, ಪೋಷಕರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಸ್ಥಾಪನೆಯ ಉದ್ದೇಶದ ಕುರಿತು ಮಾಹಿತಿ ನೀಡಲಾಯಿತು.

ನಂತರ ಬಿಸಿಸಿಐ ಮಂಗಳೂರಿನ ಅಧ್ಯಕ್ಷ ಎಸ್.ಎಂ. ರಶೀದ್ ನಿರ್ದೇಶನದಂತೆ ಯುಎಇ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತುಂಬೆ ಗ್ರೂಪಿನ ಸ್ಥಾಪಕ ಡಾ.ತುಂಬೆ ಮೊಯ್ದಿನ್ ಅವರನ್ನು ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಯುಎಇ ಘಟಕದ ಪೋಷಕರಾಗಿ ನೇಮಿಸಲಾಯಿತು. ಬಿಸಿಸಿಐ ಯುಎಇ ಘಟಕದ ಪ್ರಥಮ ಅಧ್ಯಕ್ಷರಾಗಿ ಎಸ್.ಎಂ. ಬಶೀರ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಎಸ್. ಹಿದಾಯತ್ ಅಡ್ಡೂರ್ ಮತ್ತು ಅಬ್ದುಲ್ಲಾ ಮದುಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ತನ್ವೀರ್ ಅಹಮದ್, ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಕೈಕಂಬ, ಸಂಘಟನಾ ಕಾರ್ಯದರ್ಶಿಯಾಗಿ ಸಲೀಂ ಅಲ್ತಾಫ್ ಹಾಗೂ ಖಜಾಂಚಿಯಾಗಿ ಹಂಝ ಅಬ್ದುಲ್ ಖಾದರ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News