×
Ad

ಫಿಲಂ ಅಪ್ರಿಸಿಯೇಷನ್ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2018-10-22 19:28 IST

ಬೆಂಗಳೂರು, ಅ. 22: ವಾರ್ತಾ ಇಲಾಖೆ ಮತ್ತು ಚಲನಚಿತ್ರ ಅಕಾಡೆಮಿ, ಆಶ್ರಯದಲ್ಲಿ ಭಾರತೀಯ ಫಿಲಂ ಮತ್ತು ಟೆಲಿಷನ್ ಸಂಸ್ಥೆಯು (ಎಫ್‌ಟಿಟಿಐ), ಐದು ದಿನಗಳ ಅವಧಿಯ ಫಿಲಂ ಅಪ್ರಿಸಿಯೇಷನ್ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ.

ತರಬೇತಿಯು ನವೆಂಬರ್ 10ರಿಂದ 14ರ ವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ, ಸುಲೋಚನಾ ಚಿತ್ರಮಂದಿರದಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆ ವರೆಗೆ ನಡೆಯಲಿದೆ. 18 ವರ್ಷಕ್ಕೂ ಮೇಲ್ಪಟ್ಟ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು www.ftiindia.com ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಬೇಕು.

ತರಬೇತಿ ಶುಲ್ಕ 3,600ರೂ. ಡಿಡಿಯನ್ನು ಅಕೌಂಟ್ಸ್ ಆಫೀಸರ್, ಭಾರತೀಯ ಫಿಲಂ ಟೆಲಿಷನ್ ಸಂಸ್ಥೆ, ಪುಣೆ ಇವರ ಹೆಸರಿನಲ್ಲಿ ಪಡೆದು, ಅರ್ಜಿಯೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ, ಅಮೃತ ಮಹೋತ್ಸವ ಭವನ, 20/ಎ, ಎಸ್‌ಎಫ್‌ಎಚ್‌ಎಸ್ ಲೇಔಟ್, ನಂದಿನಿ ಲೇಔಟ್, ಬೆಂಗಳೂರು-96 ಇವರಿಗೆ ಸ್ಪೀಡ್ ಪೋಸ್ಟ್‌ನಲ್ಲಿ ಅಥವಾ ಖುದ್ದಾಗಿ ಅ.31ರ ಸಂಜೆ 5ಗಂಟೆಯೊಳಗೆ ಸಲ್ಲಿಸಬಹುದು.

ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳ ತರಬೇತಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. (ಗರಿಷ್ಠ 100 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ. ಕನಿಷ್ಠ 80 ಅಭ್ಯರ್ಥಿಗಳು ಬಾರದಿದ್ದಲ್ಲಿ ತರಬೇತಿ ರದ್ದುಗೊಳಿಸಲಾಗುವುದು. ಹೆಚ್ಚಿನ ವಿವರಗಳನ್ನು www.ftiindia.com ವೆಬ್‌ಸೈಟ್‌ನಿಂದ ಪಡೆಯಬಹುದು. ದೂ.ಸಂಖ್ಯೆ: 080-2349 3410/41 ಅಥವಾ ಮೊ.ಸಂ: 98459 24555ಅನ್ನು ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News