ಚಿರತೆ ಚರ್ಮ ಮಾರಾಟ: ಆರೋಪಿ ಸೆರೆ
Update: 2018-10-22 22:06 IST
ಬೆಂಗಳೂರು, ಅ.22: ಚಿರತೆ ಚರ್ಮ ಮಾರಾಟ ಆರೋಪದ ಮೇಲೆ ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿ ಕುಮಾರ್ ಯಾನೆ ಶಂಕರೇಗೌಡ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಚೀಲವೊಂದರಲ್ಲಿ ಚಿರತೆ ಚರ್ಮ ಇಟ್ಟುಕೊಂಡು, ಮಾರಾಟ ಮಾಡುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ವಿರುದ್ಧ ಕಲಂ 429 ಅಡಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿ ತನಿಖೆ ಮುಂದುವರೆಸಲಾಗಿದೆ.