ಒಮಾನ್ ಬಿಲ್ಲವಾಸ್ ಹಬ್ಬದಲ್ಲಿ ಗಮನ ಸೆಳೆದ ಹುಲಿವೇಷ ನೃತ್ಯ

Update: 2018-10-22 17:02 GMT

ಮಸ್ಕತ್,ಅ.22 : ನವರಾತ್ರಿ ಪ್ರಯುಕ್ತ ಕೊಲ್ಲಿ ರಾಷ್ಟ್ರದ ಅತ್ಯಂತ ಕ್ರಿಯಾಶೀಲ ತಂಡ ಓಮನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ನವರಾತ್ರಿ ದಾಂಡಿಯಾ ರಾಸ್ ಮತ್ತು ದಸರಾ ಹಬ್ಬದಲ್ಲಿ ಕರ್ನಾಟಕ ಕರಾವಳಿಯ ಹುಲಿ ವೇಷಗಳ ನೃತ್ಯ ಮೆರಗು ನೀಡಿದೆ.

ಕಾರ್ಯಕ್ರಮವು ಸುಲ್ತಾನೇಟ್ ಆಫ್ ಒಮಾನಿನ ಮಸ್ಕತ್ತಿನಲ್ಲಿ ಅಲ್ ಮಾಸಾ ಹಾಲಿನಲ್ಲಿ ಇತ್ತೀಚೆಗೆ ನಡೆಯಿತು. ಒಮಾನ್ ಬಿಲ್ಲವಾಸ್ ಸಂಸ್ಥೆಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ದುರ್ಗಾ ದೇವಿಯ ಮಂಗಲಾರತಿಯನ್ನು ನಡೆಸಿ ಮತ್ತು ಪ್ರಸಾದ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಅಮಿತಾ ಶ್ರೀಧರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನೃತ್ಯ ಚಟುವಟಿಕೆಗಳಲ್ಲಿ ವಿರಾಮದ ಸಮಯದಲ್ಲಿ, ಮುಂಬರುವ ಕಂಬಳಬೆಟ್ಟು ಭಟ್ರೇನಾ ಮಗಳಾ ತುಳು ಚಿತ್ರದ ಪ್ರಚಾರದ ವಿಡಿಯೋವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಮಂಗಳೂರಿನ ಬಿಲ್ಲವ ಪ್ರತಿಭೆಗಳಾದ ಶೈಲು ಬಿರ್ವಾ, ಶರತ್ ಪೂಜಾರಿ ಕಪು, ಲವಣ ಕೋಟ್ಯಾನ್ ಮತ್ತು ಸಂಕೇತ್ ಪೂಜಾರಿ ಕಾಣಿಸಿಕೊಂಡಿದ್ದರು. ಸಂದೇಶ್ ರಾಜ್ ಬಂಗೇರ ಅವರ '2 ಎಕರೆ' ಇನ್ನೊಂದು ಚಿತ್ರದ ಪ್ರಚಾರವನ್ನೂ ಸಹ ಪ್ರದರ್ಶಿಸಲಾಯಿತು. ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯ ಕೊಡಿಯಾಲಬೈಲ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News