ಬಾಂಬ್ ಸ್ಫೋಟ ಪ್ರಕರಣ: 10 ವರ್ಷದ ಬಳಿಕ ಆರೋಪಿ ಸಿಸಿಬಿ ಬಲೆಗೆ

Update: 2018-10-23 14:38 GMT

ಬೆಂಗಳೂರು, ಅ.23: ನಗರ ವ್ಯಾಪ್ತಿಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಲೀಂ (41) ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

2008ರಲ್ಲಿ ಬೆಂಗಳೂರಿನ ಮಡಿವಾಳ, ಕೋರಮಂಗಲ, ಆಡುಗೋಡಿ, ಅಶೋಕನಗರ, ಎಸ್.ಆರ್.ನಗರ, ಬ್ಯಾಟರಾಯನಪುರ, ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಕಡೆ ಸರಣಿ ಬಾಂಬ್ ಸ್ಪೋಟ ನಡೆಸಿದ್ದ ಎನ್ನಲಾಗಿದ್ದು, ಬಾಂಬ್ ಸ್ಪೋಟದಿಂದ ಸುಧಾ ಎಂಬುವರು ಮೃತಪಟ್ಟಿದ್ದರು. ಹಲವರಿಗೆ ಗಾಯಗಳಾಗಿದ್ದವು.

ಆರೋಪಿ ಸಲೀಂ ಕೇರಳದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೇರಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಲಿದೆ.

ಅಪರಾಧ ಉಪ ಪೊಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಸಿಬಿ ಎಸಿಪಿ ಪಿ.ಟಿ.ಸುಬ್ರಹ್ಮಣ್ಯ, ಬಿ.ಎಸ್.ಮೋಹನ್, ಎಸ್ಸೈ ಕೆ.ಜಿ.ಸತೀಶ್, ನಾರಾಯಣ ಗೌಡ, ಪಿಎಸ್ಸೈ ಪ್ರವೀಣ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News