×
Ad

ಮೂರು ತಿಂಗಳೊಳಗೆ ರಸ್ತೆ ಡಾಂಬರೀಕರಣ: ಡಾ.ಜಿ.ಪರಮೇಶ್ವರ್

Update: 2018-10-23 21:36 IST

ಜಮಖಂಡಿ, ಅ. 23: ಜಮಖಂಡಿ ಕ್ಷೇತ್ರದ ಮೈಗೂರು ಹಾಗೂ ಸಾವಳಗಿ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಮೂರು ತಿಂಗಳ ಒಳಗಾಗಿ ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.

ಮಂಗಳವಾರ ಕ್ಷೇತ್ರದ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಿದ ಅವರು, ಈ ಭಾಗದಲ್ಲಿ ಸಿದ್ದು ನ್ಯಾಮಗೌಡರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಇಡೀ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಇದೆ. ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉತ್ಸುಕರಾಗಿದ್ದರು.

ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಅವರ ಪುತ್ರ ಸಿದ್ದು ನ್ಯಾಮಗೌಡರನ್ನು ಪ್ರತಿನಿಧಿಸಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹೊಣೆ ಹೊತ್ತಿದ್ದಾರೆ. ಈ ಭಾಗದಲ್ಲಿ ಡಾಂಬರೀಕರಣದ ಸಮಸ್ಯೆ ಕೇಳಿ ಬಂದಿದೆ. ಇನ್ನು ಮೂರು ತಿಂಗಳೊಳಗಾಗಿ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಸರಕಾರ ಆಸ್ಥೆ ವಹಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News