ಧಾರವಾಡ: ಗಾಂಧಿ 150 ಅಭಿಯಾನಕ್ಕೆ ಸಂಭ್ರಮದ ಸ್ವಾಗತ

Update: 2018-10-23 17:00 GMT

ಧಾರವಾಡ, ಅ.23: ಮಹಾತ್ಮಾ ಗಾಂಧೀಜಿ 150ನೆ ಜನ್ಮ ವರ್ಷಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ನಡೆಸುತ್ತಿರುವ ಗಾಂಧಿ 150 ಸ್ತಬ್ಧಚಿತ್ರ ಅಭಿಯಾನ ಧಾರವಾಡ ನಗರಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿತು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಮಹಾದ್ವಾರದ ಬಳಿ ಶಾಸಕ ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಅಭಿಯಾನವನ್ನು ಬರಮಾಡಿಕೊಂಡು ಗಾಂಧೀ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಆಕರ್ಷಕ ಸ್ತಬ್ಧಚಿತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಅಮೃತ ದೇಸಾಯಿ ಹಾಗೂ ಜಿಲ್ಲಾಧಿಕಾರಿಗಳು ಗಾಂಧೀಜಿಯವರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸಲು ಇದು ಉತ್ತಮ ಪ್ರಯತ್ನವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬೋಳುವಾರು ಮಹಮ್ಮದ್ ಕುಂಞಿ ರಚನೆಯ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಪುಸ್ತಕವನ್ನು ಬಿಡುಗಡೆ ಮಾಡಿ, ಉಚಿತವಾಗಿ ವಿತರಿಸಲಾಯಿತು. ಬೆಳವಟಗಿ ಗ್ರಾಮದ ಹುಲಕುಂದ ಶಿವಲಿಂಗೇಶ್ವರ ಗೀಗೀ ಮೇಳ ಹಾಗೂ ಕೆಲಗೇರಿಯ ದುರ್ಗಾದೇ ಜಗ್ಗಲಿಗೆ ಮೇಳದ ಕಲಾವಿದರು ಅಭಿಯಾನದ ಉದ್ದಕ್ಕೂ ಕಲಾಪ್ರದರ್ಶನ ನೀಡಿದರು.

ಜ್ಯುಬಿಲಿ ವೃತ್ತ, ಮಹಾನಗರ ಪಾಲಿಕೆ, ಹಳೇಬಸ್‌ಸ್ಟಾಂಡ್, ಸುಭಾಷ್ ರಸ್ತೆ, ಗಾಂಧೀಚೌಕ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಅಭಿಯಾನ ಸಂಚರಿಸಿತು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಜಿ. ಕೊರವರ, ಪ್ರೊಬೇಷನರಿ ಎಸಿ ಪಾರ್ವತಿ ರೆಡ್ಡಿ, ತಹಶೀಲ್ದಾರ ಪ್ರಕಾಶ್ ಕುದರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಪಿ.ಎಸ್.ಹಿರೇಮಠ, ವಾರ್ತಾ ಸಹಾಯಕ ಸುರೇಶ್ ಹಿರೇಮಠ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News