ಪತ್ನಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷಗಳ ಬಳಿಕ ಸೆರೆ

Update: 2018-10-24 16:34 GMT

ಬೆಂಗಳೂರು, ಅ.24: ಪತಿಯನ್ನು ಕೊಲೆಗೈದ ಪ್ರಕರಣ ಸಂಬಂಧ ಖಾಸಗಿ ಕಂಪೆನಿಯ ಟೆಕ್ಕಿಯೋರ್ವನನ್ನು 15 ವರ್ಷಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ.

ತರುಣ್ ಯಾನೆ ರಾಜ್ ಎಂಬಾತ ಬಂಧಿತ ಆರೋಪಿ ಎಂದು ಸಿಸಿಬಿ ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್ ತಿಳಿಸಿದ್ದಾರೆ.

ಏನಿದು ಪ್ರಕರಣ?: 2003ನೇ ಸಾಲಿನಲ್ಲಿ ಗುಜರಾತಿನ ಅಹಮದಾಬಾದ್ ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿ ತರುಣ್ ಹಾಗೂ ಈತನ ಸಹಚರು ಸೇರಿ ಪತ್ನಿ ಸಜಿನಿ(26) ಎಂಬಾಕೆಯನ್ನು ಕೊಲೆ ಮಾಡಿರುವ ಆರೋಪದಡಿ ಅಹಮದಾಬಾದ್ ನಗರ ಠಾಣಾ ಪೊಲೀಸರು ಇದೇ ವರ್ಷದಲ್ಲಿ ಈತನ ಸಹಚರರನ್ನು ಬಂಧಿಸಿದ್ದರು ಎಂದು ಸಿಸಿಬಿ ಹೇಳಿದೆ.

ಆದರೆ, ಪ್ರಕರಣದ ಪ್ರಮುಖ ಆರೋಪಿ ತರುಣ್ ಬೆಂಗಳೂರಿನಲ್ಲೇ ಖಾಸಗಿ ಕಂಪೆನಿಯೊಂದಲ್ಲಿ ಮುಖ್ಯ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಈ ಬಗ್ಗೆ ಅಹಮದಾಬಾದ್ ಪೊಲೀಸರಿಂದ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ನಕಲಿ ಹೆಸರು: ಕೇವಲ ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ತರುಣ್, ತನ್ನ ಹೆಸರನ್ನು ಪ್ರವೀಣ್ ಬಾಟಲೆ ಎಂದು ಹೇಳಿಕೊಂಡಿದ್ದ. ಪ್ರಕರಣ ಸಂಬಂಧ ಮೊದಲಿಗೆ ವಿಚಾರಣೆ ನಡೆಸಿದಾಗ ಪತ್ನಿಯ ಕೊಲೆಯನ್ನು ಡಕಾಯಿತರ ತಂಡವೊಂದು ಮಾಡಿರುವುದಾಗಿ ಅಹಮದಾಬಾದ್ ನಗರದ ಪೊಲೀಸರಿಗೆ ತಿಳಿಸಿ ತನಿಖೆಯ ದಿಕ್ಕನ್ನು ತಪ್ಪಿಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News