×
Ad

ಯೋಜನೆಯೇತರ ಕೆಲಸಗಳಿಗೆ ನಿಯೋಜಿಸದಂತೆ ಸೂಚನೆ

Update: 2018-10-24 22:24 IST

ಬೆಂಗಳೂರು, ಅ.24: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಶಿಶು ಅಭಿವೃದ್ಧಿ ಯೋಜನೇತರ ಯಾವುದೇ ಕೆಲಸಗಳಿಗೆ ನಿಯೋಜಿಸಬಾರದು ಎಂದು ಸೂಚನೆ ಹೊರಡಿಸಿದೆ.

ಇತ್ತೀಚಿಗೆ ಕೇಂದ್ರ ಸರಕಾರ ಶಿಶು ಅಭಿವೃದ್ಧಿ ಯೋಜನೇತರ ಕಾರ್ಯಗಳಿಗೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ನೇಮಕ ಮಾಡಬಾರದು ಎಂದು ಸೂಚನೆ ನೀಡಿತ್ತು. ಆದರೂ, ರಾಜ್ಯದಲ್ಲಿ ಹಲವು ಬಾರಿ ವಿವಿಧ ಕೆಲಸಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ಸಂಬಂಧ ಹಲವಾರು ಬಾರಿ ವಿರೋಧವೂ ವ್ಯಕ್ತವಾಗಿತ್ತು.

ವಿಧವೆ ಸಮಿಕ್ಷೆ ಹಾಗೂ ಕುಷ್ಠ ರೊಗ ಪತ್ತೆ ಆಂದೋಲನದಲ್ಲಿ ಭಾಗವಹಿಸಲು ಸೂಚಿಸಿರುವುದಾಗಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದ್ದರು. ಹೀಗಾಗಿ, ಇಲಾಖೆಯು ಸೂಚನೆ ನೀಡಿದ್ದು, ಯಾರನ್ನೂ ನೇಮಕ ಮಾಡಿಕೊಳ್ಳಬಾರದು ಎಂದು ಹೇಳಿದೆ.

ನಿವೃತ್ತರಿಗೆ ಬುಲಾವ್: ಕೇಂದ್ರ ಪುರಸ್ಕೃತ ಸಮಗ್ರ ಶಿಶು ಅಭಿವೃದ್ಧಿ ಯೊಜನೆ ಪ್ರಕಾರ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಐಸಿಡಿಎಸ್‌ನ ಆರು ಸೇವೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸುವುದು ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಮುಖ್ಯ ಕರ್ತವ್ಯ.

ಆದರೆ, ಇತರ ಕೆಲಸಗಳನ್ನು ವಹಿಸುವುದರಿಂದ ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರಿಗೆ ಕೆಲಸದ ಒತ್ತಡ ಹೆಚ್ಚುವ ಜತೆಗೆ ಫಲಾನುಭವಿಗಳಿಗೆ ಸಮರ್ಪಕ ಯೊಜನೆಯ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇತರ ಕೆಲಸಗಳನ್ನು ನಿಯೋಜಿಸದಿರಲು ಕೇಂದ್ರ ಸರಕಾರ ಸೂಚಿಸಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿರುವ ಮಹಿಳಾ ಮತ್ತು ಮ್ಕಕಳ ಕಲ್ಯಾಣ ಇಲಾಖೆ, ಇತರ ಕೆಲಸಗಳಿಗೆ ಅಂಗನವಾಡಿಯ ನಿವೃತ್ತ ಕಾರ್ಯಕರ್ತೆ-ಸಹಾಯಕಿಯರನ್ನು ಬಳಸಿಕೊಳ್ಳಲು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News