ಬೆಂಗಳೂರು: ಗುಂಡು ಹಾರಿಸಿದ ಆರೋಪಿ ಬಂಧನ
Update: 2018-10-24 22:37 IST
ಬೆಂಗಳೂರು, ಅ.24: ಜಮೀನು ವಿವಾದ ಸಂಬಂಧ ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಜಿಗಣಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಹೊರವಲಯದ ಲಿಂಗಾಪುರ ಗ್ರಾಮದ ನಿವಾಸಿ ಸಾದಪ್ಪ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಆರೋಪಿಯು ಅ.21ರಂದು ಲಿಂಗಾಪುರ ಗ್ರಾಮದ ನಿವಾಸಿ ರಾಮು ಎಂಬಾತನ ಕಾಲಿಗೆ ಅ.21ರಂದು ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಸಾದಪ್ಪನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.