×
Ad

ಕಿಡ್ನಿ ವೈಫಲ್ಯ ಸಮಸ್ಯೆ: ಡಿ ದರ್ಜೆ ನೌಕರ ನೇಣಿಗೆ ಶರಣು

Update: 2018-10-25 21:07 IST

ಬೆಂಗಳೂರು, ಅ.25: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪುಟ್ಟರಾಜು(54) ಮೃತ ನೌಕರ. ತೀವ್ರತರನಾದ ಹೊಟ್ಟೆ ನೋವು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪುಟ್ಟರಾಜು ಚಿಕಿತ್ಸೆಗಾಗಿ ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಆರೋಗ್ಯದಲ್ಲಿ ಯಾವುದೆ ರೀತಿಯ ಚೇತರಿಕೆ ಕಂಡಿಲ್ಲ. ಇದರಿಂದ ಬೇಸತ್ತು ತಡರಾತ್ರಿ 11 ಗಂಟೆಯ ಸುಮಾರಿಗೆ ಆಸ್ಪತ್ರೆಯ ಮೆಟ್ಟಿಲಿಗೆ ವೈರ್‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News