×
Ad

ಬೆಂಗಳೂರು: ಅ.26 ರಿಂದ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನ

Update: 2018-10-25 22:03 IST

ಬೆಂಗಳೂರು, ಅ.25: ಜುವೆಲ್ಸ್ ಆಫ್ ಇಂಡಿಯಾ ವತಿಯಿಂದ ಅ.26 ರಿಂದ 29 ರವರೆಗೆ ನಗರದ ಮಲ್ಯರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಭಾರತದಲ್ಲಿಯೇ ಅತಿದೊಡ್ಡ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪ್ರದರ್ಶನದ ಸಂಚಾಲಕ ಸಂದೀಪ್ ಬೇಕಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿರುಚಿಯ ಮತ್ತು ತಮ್ಮ ಬಜೆಟ್‌ಗೆ ಹೊಂದುವ ಮನಮೋಹಕ ಆಭರಣಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ದೇಶದ 125ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ಈ ಮೇಳದಲ್ಲಿ ತಮ್ಮ ವೈವಿದ್ಯಮಯ ಆಭರಣಗಳನ್ನು ಪ್ರದರ್ಶಿಸಲಿದ್ದು, ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷದ ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿಯಾಗಿದ್ದಾರೆ ಎಂದು ತಿಳಿಸಿದರು.

ಪ್ರದರ್ಶನದ ವ್ಯವಸ್ಥೆ ಮಾಡಿರುವ ಭಾರತದ ಅತ್ಯುತ್ತಮ ಚಿಲ್ಲರೆ ಆಭರಣ ಸಂಸ್ಥೆ ಜ್ಯುವೆಲ್ಸ್ ಆಫ್ ಇಂಡಿಯಾಗೆ 2016-17ನೇ ಸಾಲಿನ ಪ್ರತಿಷ್ಠಿತ ಟೈಮ್ಸ್ ರಿಟೈಲ್ ಐಕಾನ್ ಪ್ರಶಸ್ತಿ ಲಭಿಸಿದೆ. ಈ ಬಾರಿಯ ಪ್ರದರ್ಶನದಲ್ಲಿ ಜಗತ್ತಿನ ಅತಿದೊಡ್ಡ ಆಭರಣ ಸಂಸ್ಥೆಯಾದ ಭೀಮಾ ಜ್ಯುವೆಲರ್ಸ್‌ ಮತ್ತು ಜೋಯಲುಕಾಸ್ ಜ್ಯುವೆಲರ್ಸ್‌ ಪ್ರಮುಖ ಆಕರ್ಷಣೆಯಾಗಿವೆ. ಈ ಸಂಸ್ಥೆಗಳು ಗುಣಮಟ್ಟದ ಮತ್ತು ಅದ್ಭುತ ಚಿನ್ನ, ವಜ್ರದ ಆಭರಣ ವಿನ್ಯಾಸಕ್ಕೆ ಖ್ಯಾತಿ ಪಡೆದಿವೆ ಎಂದು ಹೇಳಿದರು.

ಜ್ಯುವೆಲ್ಸ್ ಆಫ್ ಇಂಡಿಯಾದಲ್ಲಿ ಭೀಮಾ ಜ್ಯುವೆಲರ್ಸ್‌ ತನ್ನ ಭೀಮಾ ಮಹಾ ಉತ್ಸವ್ ಲಕ್ಕಿ ಬಹುಮಾನ ಯೋಜನೆ ವಿಸ್ತರಿಸಿದೆ. ಅದೃಷ್ಟಶಾಲಿಯ ಗ್ರಾಹಕರಿಗೆ 11 ಟಾಟಾ ಟಿಯೋಗ ಕಾರುಗಳು, 55 ಸ್ಕೂಟರ್‌ಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಈ ಬಾರಿಯ ಮೇಳದಲ್ಲಿ 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಪ್ರವೇಶ ಶುಲ್ಕ 49 ರೂ.ನಿಗದಿಪಡಿಸಲಾಗಿದೆ.

ಈ ಮಾರಾಟದಲ್ಲಿ ಭೀಮಾ ಜ್ಯುವೆಲರ್ಸ್, ಜೋಯುಲುಕ್ಕಾಸ್, ಕ್ರಿಯೇಷನ್ ಜ್ಯುವೆಲರ್ಸ್, ಪಂಚ ಕೇಸರಿ ಬಡೇರಾ ಜ್ಯುವೆಲರ್ಸ್‌, ಪಿಎಂಜೆ ಜ್ಯುವೆಲರ್ಸ್‌, ನೀಲಕಾಂತ ಜ್ಯುವೆಲ್ಸ್, ಗಣೇಶ್ ಡೈಮಂಡ್ ಜ್ಯುವೆಲರ್ಸ್‌ ಸಂಸ್ಥೆಗಳು ವಿವಿಧ ಆಕರ್ಷಣೆಯ ಆಭರಣಗಳನ್ನು ಪ್ರದರ್ಶಿಸಲಿವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News