×
Ad

ರಫೇಲ್ ಕಡತ ಅಲೋಕ್ ವರ್ಮಾ ಪರಿಶೀಲನೆಯಲ್ಲಿತ್ತು ಎನ್ನುವ ವರದಿ ಸುಳ್ಳು: ಸಿಬಿಐ

Update: 2018-10-25 22:35 IST

ಹೊಸದಿಲ್ಲಿ, ಅ. 25: ಕೇಂದ್ರ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಿದ ಸಂದರ್ಭ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಪರಿಶೀಲನೆಯಲ್ಲಿ ಇತ್ತು ಎಂಬ ವರದಿಯನ್ನು ಸಿಬಿಐ ಗುರುವಾರ ತಿರಸ್ಕರಿಸಿದೆ.

ಕೇಂದ್ರ ಸರಕಾರ ಮಧ್ಯರಾತ್ರಿ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸುವ ಸಂದರ್ಭ ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿರುವುದು ಸೇರಿದಂತೆ ಹಲವು ನಿರ್ಣಾಯಕ ಕಡತಗಳು ವರ್ಮಾ ಅವರ ಪರಿಶೀಲನೆಯಲ್ಲಿ ಇದ್ದುವು ಎಂದು ಹಲವು ಪತ್ರಿಕೆಗಳನ್ನು ವರದಿ ಮಾಡಿದ್ದವು. ವರದಿ ಸುಳ್ಳು ಎಂದು ಹೇಳಿರುವ ಸಿಬಿಐ ವಕ್ತಾರ ಅಭಿಷೇಕ್ ದಯಾಳ್, ಇದು ಸ್ಥಾಪಿತ ಹಿತಾಸಕ್ತಿಗಳು ಸೃಷ್ಟಿಸಿದ ಸುಳ್ಳು. ಸಿಬಿಐಯಲ್ಲಿರುವ ಪ್ರತಿ ಹಂತದ ಕಡತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

 ಕೆಲವು ಪತ್ರಿಕೆಗಳಲ್ಲಿ ವರದಿಯಾದ ಸುದ್ದಿ ಸಿಬಿಐಯ ವಿಶ್ವಾಸಾರ್ಹತೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಸಿಬಿಐ ಅಂತಾರಾಷ್ಟ್ರೀಯವಾಗಿ ಪ್ರಕರಣಗಳ ತನಿಖೆ ನಡೆಸುತ್ತದೆ. ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಬಾರದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News