ಖಶೋಗಿ ಅವಶೇಷಗಳು ಎಲ್ಲಿವೆ?: ಸೌದಿ ಅರೇಬಿಯಕ್ಕೆ ಎರ್ದೊಗಾನ್ ಪ್ರಶ್ನೆ

Update: 2018-10-26 16:40 GMT

ಇಸ್ತಾಂಬುಲ್, ಅ. 26: ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಲ್ಲಿ ಹತ್ಯೆಗೀಡಾದ ಪತ್ರಕರ್ತ ಜಮಾಲ್ ಖಶೋಗಿಯ ಅವಶೇಷಗಳು ಎಲ್ಲಿವೆ ಎನ್ನುವುದನ್ನು ಬಹಿರಂಗಪಡಿಸುವಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಸೌದಿ ಅರೇಬಿಯವನ್ನು ಒತ್ತಾಯಿಸಿದ್ದಾರೆ.

 ಖಶೋಗಿ ಹತ್ಯೆ ಬಗ್ಗೆ ಈವರೆಗೆ ಹೊರಜಗತ್ತಿಗೆ ತಿಳಿಸಿರುವುದಕ್ಕಿಂತ ಹೆಚ್ಚಿನ ಮಾಹಿತಿ ಟರ್ಕಿ ಬಳಿ ಇದೆ ಎಂದು ಅವರು ಹೇಳಿದರು.

ಸೌದಿ ಕೌನ್ಸುಲೇಟ್‌ನಲ್ಲಿ ಅಕ್ಟೋಬರ್ 2ರಂದು ಪತ್ರಕರ್ತನ ಕೊಲೆಯಾದ ಬಳಿಕ, ಮೃತದೇಹವನ್ನು ಸೌದಿ ಏಜಂಟರಿಂದ ಪಡೆದನೆನ್ನಲಾದ ಸ್ಥಳೀಯ ವ್ಯಕ್ತಿಯ ಗುರುತನ್ನೂ ಸೌದಿ ಅರೇಬಿಯ ಬಹಿರಂಗಪಡಿಸಬೇಕಾಗಿದೆ ಎಂದು ಎರ್ದೊಗಾನ್ ನುಡಿದರು.

ಸಂಸತ್ತಿನಲ್ಲಿ ತನ್ನ ‘ಎಕೆ ಪಕ್ಷ’ದ ಪ್ರಾಂತೀಯ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸೌದಿ ಅರೇಬಿಯದ ಪಬ್ಲಿಕ್ ಪ್ರಾಸಿಕ್ಯೂಟರ್ ರವಿವಾರ ಇಸ್ತಾಂಬುಲ್‌ನ ಪಬ್ಲಿಕ್ ಪ್ರಾಸಿಕ್ಯೂಟರ್‌ರನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News