ಟರ್ಕಿಯಲ್ಲಿ ಸೌದಿ ಅಧಿಕಾರಿಗಳು ಬಂಧಿಸಲಾರರು ಎಂದು ಭಾವಿಸಿದ್ದರು: ಜಮಾಲ್ ಖಶೋಗಿ ಗೆಳತಿ

Update: 2018-10-26 17:07 GMT

ರಿಯಾದ್,ಅ.26: ಟರ್ಕಿಯಲ್ಲಿ ತನ್ನನ್ನು ಸೌದಿ ಅರೇಬಿಯದ ಅಧಿಕಾರಿಗಳು ವಿಚಾರಣೆ ಮಾಡಲಾರರು ಹಾಗೂ ಬಂಧಿಸಲಾರರು ಎಂಬುದಾಗಿ ಜಮಾಲ್ ಖಶೋಗಿ ಭಾವಿಸಿದ್ದರು ಎಂದು ಅವರನ್ನು ಮದುವೆಯಾಗಬೇಕಾಗಿದ್ದ ಮಹಿಳೆ ಹಾತಿಸ್ ಸೆಂಗಿಝ್ ಶುಕ್ರವಾರ ಹೇಳಿದ್ದಾರೆ.

ಆದಾಗ್ಯೂ, ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್‌ಗೆ ನಾನು ಹೋದರೆ ಉದ್ವಿಗ್ನತೆ ಉಂಟಾಗಬಹುದು ಎಂಬ ಕಳವಳವನ್ನೂ ಅವರು ಹೊಂದಿದ್ದರು ಎಂಬುದಾಗಿ ಟರ್ಕಿ ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ವಾಸ್ತವವಾಗಿ ಅವರು ಸೌದಿ ಕೌನ್ಸುಲೇಟ್‌ಗೆ ಹೋಗಲು ಬಯಸಿರಲಿಲ್ಲ ಎಂದು ಹೇಳಿದರು.

ತನ್ನ ವಿವಾಹ ವಿಚ್ಛೇದನದ ದಾಖಲೆಗಳನ್ನು ಪಡೆಯಲು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿ ಪ್ರವೇಶಿಸಿದ್ದ ಭಿನ್ನಮತೀಯ ಪತ್ರಕರ್ತನನ್ನು 15 ಸದಸ್ಯರ ಸೌದಿ ಹಂತಕರ ತಂಡವೊಂದು ಚಿತ್ರಹಿಂಸೆ ನೀಡಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News