ಮಾಜಿ ಎನ್‌ಸಿಪಿ ಮುಖಂಡ ತಾರಿಕ್ ಅನ್ವರ್ ಕಾಂಗ್ರೆಸ್‌ಗೆ ಸೇರ್ಪಡೆ

Update: 2018-10-27 07:27 GMT

ಹೊಸದಿಲ್ಲಿ, ಅ.27: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮಾಜಿ ಮುಖಂಡ ತಾರಿಕ್ ಅನ್ವರ್ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

2019ರ ಲೋಕಸಭಾ ಚುನಾವಣೆಗೆ ಮೊದಲು ಅನ್ವರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೊಸ ಶಕ್ತಿ ಬಂದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅನ್ವರ್ ಸೇರ್ಪಡೆಯಾದರು.

1999ರಲ್ಲಿ ಶರದ್ ಪವಾರ್ ಜೊತೆಗೆ ಕಾಂಗ್ರೆಸ್ ತೊರೆದಿದ್ದ ಅನ್ವರ್ ಎನ್‌ಸಿಪಿ ಸ್ಥಾಪಕರಲ್ಲಿ ಓರ್ವರಾಗಿದ್ದರು. ಇತ್ತೀಚೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಮರ್ಥಿಸಿ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದ ಅನ್ವರ್ ಸೆ.28 ರಂದು ಎನ್‌ಸಿಪಿ ತ್ಯಜಿಸಿದ್ದರು. ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.

ಶನಿವಾರ ತಮ್ಮ ಬೆಂಬಲಿಗರೊಂದಿಗೆ ತೊಘಲಕ್ ಲೇನ್‌ನಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ್ದ ಅನ್ವರ್‌ರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಲಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್,‘‘ಅವರು ಕಳೆದ ಕೆಲವು ಸಮಯದಿಂದ ಕಾಂಗ್ರೆಸ್ ಸೇರಲು ಬಯಸಿದ್ದರು. ಇಂದು ಅವರು ಆ ಪಕ್ಷವನ್ನು ಸೇರಿದ್ದಾರೆ. ಆದರೆ, ಅವರು ಪಕ್ಷ ಬಿಡಲು ನೀಡಿದ್ದ ಕಾರಣ ನಮಗೆ ಬೇಸರ ತಂದಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News