ಮೋದಿ ‘ಶಿವಲಿಂಗದ ಮೇಲಿನ ಚೇಳು’ ಇದ್ದಂತೆ ಎಂದು ಆರೆಸ್ಸೆಸ್ ಮೂಲವೊಂದು ತಿಳಿಸಿತ್ತು: ಶಶಿ ತರೂರ್

Update: 2018-10-28 15:33 GMT

ಬೆಂಗಳೂರು, ಅ.28: ಆರೆಸ್ಸೆಸ್ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ‘ಶಿವಲಿಂಗದ ಮೇಲಿರುವ ಚೇಳಿನಂತೆ’. ಅದನ್ನು ಕೈಯಿಂದ ತೆಗೆದು ಬಿಸಾಡುವುದಕ್ಕೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದರು.

ರವಿವಾರ ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಏರ್ಪಡಿಸಿದ್ದ, ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಕರ್ತರೊಬ್ಬರಿಗೆ ಅನಾಮಧೇಯ ಆರೆಸ್ಸೆಸ್ ಮೂಲವೊಂದು ಮೋದಿ ಕುರಿತಾಗಿ ಹೇಳಿದ ರೂಪಕ ಇದು. ‘ಮೋದಿ ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ. ಅದನ್ನು ನೀವು ಕೈಯಿಂದ ತೆಗೆಯಲೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗುವುದಿಲ್ಲ. ಈ ಹೇಳಿಕೆಯೇ ಮೋದಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧ ಯಾವ ಮಟ್ಟಿಗೆ ಹದಗೆಟ್ಟಿದೆ ಎನ್ನುವುದನ್ನು ತಿಳಿಸುತ್ತದೆ ಎಂದು ತಿಳಿಸಿದರು.

ಸರಕಾರದ ಉನ್ನತ ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸಲು ಪ್ರಧಾನಿ ಕಚೇರಿಯ ಅನುಮತಿ ಪಡೆಯಬೇಕಾಗಿದೆ. ಸಿಬಿಐ ನಿರ್ದೇಶಕರನ್ನು ಬದಲಿಸಿದ್ದು, ಗೃಹ ಸಚಿವರಿಗೆ ಗೊತ್ತೇ ಇಲ್ಲ. ಸರಕಾರದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಬಗ್ಗೆ ವಿದೇಶಾಂಗ ಸಚಿವರಿಗೆ ಗೊತ್ತಿರಲ್ಲ, ಕೊನೆಯ ಕ್ಷಣವರೆಗೂ ರಫೇಲ್ ಒಪ್ಪಂದದಲ್ಲಿ ಯಾವ ಬದಲಾವಣೆ ಆಗಿದೆ ಎನ್ನುವುದು ರಕ್ಷಣಾ ಸಚಿವರಿಗೂ ತಿಳಿದಿಲ್ಲ. ಇದೆಲ್ಲಾವೂ ಪ್ರಧಾನಿ ಮೋದಿ ಆಡಳಿತದ ಪರಿಣಾಮ ಎಂದು ನುಡಿದರು.

ಪ್ರಧಾನಿ ಮೋದಿ ಕುರಿತು ಕೃತಿ ರಚಿಸುವಾಗ ಮೂಲಭೂತ ವಿಚಾರಗಳ ಗೊಂದಲ ಕಾಡಿತ್ತು. ನನ್ನ ಕೃತಿಯ ಹಿನ್ನೆಲೆಯಲ್ಲಿ ಲಕ್ಷಗಟ್ಟಲೆ ಆರ್‌ಟಿಐ ಅರ್ಜಿ ಸಲ್ಲಿಕೆಯಾದವು. ಆದರೆ, ಅರ್ಜಿಗಳ ವಿಚಾರಣೆಯಾಗದೆ ಬಾಕಿ ಉಳಿದಿವೆ ಎಂದ ಅವರು, ನರೇಂದ್ರ ಮೋದಿ ಅವರ ಜ್ಞಾನ, ನಾಲ್ಕು ವರ್ಷಗಳ ಅವರ ಅಧಿಕಾರ ಅವಧಿ, ವಿದೇಶಿ ಪ್ರವಾಸ ಸೇರಿದಂತೆ ಹಲವು ವಿಚಾರಗಳನ್ನು ಪುಸ್ತಕದಲ್ಲಿ ವಿಮರ್ಶೆಗೊಳಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನೆರೆಯ ರಾಷ್ಟ್ರಗಳ ಸಂಬಂಧ ಹಾಳಾಗಿದೆ. ಹಲವಾರು ವಾಣಿಜ್ಯ ಒಪ್ಪಂದಗಳು ಮುರಿದು ಬಿದ್ದಿವೆ. ಇದಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ನನ್ನ ಕೃತಿಯಲ್ಲಿವೆ. ಪುಸ್ತಕದಲ್ಲಿ ಸಾತ್ಯಕ್ಕಿಂತ ತತ್ವವನ್ನು ಬೋಧಿಸುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದೇನೆ. ಮೋದಿತ್ವ ಮತ್ತು ಹಿಂದುತ್ವದ ಮಿಶ್ರಣ ಇದೆ ಎಂದು ಶಶಿ ತರೂರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News