ಸತತ 11ನೇ ದಿನವೂ ಪೆಟ್ರೋಲ್,ಡೀಸೆಲ್ ಬೆಲೆಗಳಲ್ಲಿ ಕಡಿತ

Update: 2018-10-28 14:21 GMT

ಹೊಸದಿಲ್ಲಿ,ಅ.28: ಜಾಗತಿಕ ಕಚ್ಚಾತೈಲ ಬೆಲೆಗಳು ಇಳಿಯುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಇಂಧನ ಬೆಲೆಗಳ ಕಡಿತ ಸತತ 11ನೇ ದಿನವಾದ ರವಿವಾರವೂ ಮುಂದುವರಿದಿದ್ದು,ಪ್ರತಿ ಲೀಟರ್ ಪೆಟ್ರೋಲ್ ಬೆಲೆ 40 ಪೈಸೆ ಮತ್ತು ಡೀಸೆಲ್ ಬೆಲೆ 33 ಪೈಸೆ ಕಡಿಮೆಯಾಗಿವೆ.

ರಾಜಧಾನಿ ದಿಲ್ಲಿಯಲ್ಲಿ ರವಿವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 84.05 ರೂ. ಮತ್ತು ಡೀಸೆಲ್ ಬೆಲೆ 74.05 ರೂ.ಆಗಿದ್ದವು.

ಸತತ 11 ದಿನಗಳ ಕಡಿತದ ಪರಿಣಾಮ ಪ್ರತಿ ಲೀ.ಪೆಟ್ರೋಲ್ ಬೆಲೆ 2.78 ರೂ. ಮತ್ತು ಡೀಸೆಲ್ ಬೆಲೆ 1.64 ರೂ.ಗಳಷ್ಟು ಕಡಿಮೆಯಾಗಿವೆ.

ಅ.4ರಂದು ಪೆಟ್ರೋಲ್ ಪ್ರತಿ ಲೀ.ಗೆ 84 ರೂ. ಮತ್ತು ಡೀಸೆಲ್ ಪ್ರತಿ ಲೀ.ಗೆ 75.45 ರೂ.ಗಳ ದಾಖಲೆ ಮಟ್ಟವನ್ನು ತಲುಪಿದ್ದು,ಸರಕಾರವು ಅಂದು ಇವುಗಳ ಬೆಲೆಗಳನ್ನು ತಲಾ 2.50 ರೂ.ಗಳಷ್ಟು ತಗ್ಗಿಸುವುದಾಗಿ ಘೋಷಿಸಿತ್ತು. ಪರಿಣಾಮವಾಗಿ ಅ.5ರಂದು ಇವೆರಡೂ ಇಂಧನಗಳ ಬೆಲೆ ಪ್ರತಿ ಲೀ.ಗೆ ಅನುಕ್ರಮವಾಗಿ 81.50 ರೂ. ಮತ್ತು 72.95 ರೂ.ಗೆ ಇಳಿದಿದ್ದವು. ಆದರೆ ಜಾಗತಿಕ ಮಾರುಕಟ್ಟೆ ಏರುಗತಿಯಲ್ಲಿದ್ದರಿಂದ ಅ.16ರವೇಳೆಗೆ ದಿಲ್ಲಿಯಲ್ಲಿ ಬೆಲೆಗಳು ಪ್ರತಿ ಲೀ.ಪೆಟ್ರೋಲ್‌ಗೆ 82.83 ರೂ. ಮತ್ತು ಡೀಸೆಲ್‌ಗೆ 75.69 ರೂ.ಗೆ ಏರಿಕೆಯಾಗಿದ್ದವು.

ಅ.18ರಿಂದ ಜಾಗತಿಕ ಬೆಲೆಗಳಿ ಇಳಿಕೆಯಾಗುತ್ತಿದ್ದು,ಡಾಲರ್‌ನೆದುರು ರೂಪಾಯಿಯೂ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಇಂಧನಗಳ ಬೆಲೆಗಳು ಎರಡು ತಿಂಗಳ ಕನಿಷ್ಠ ಮಟ್ಟಕ್ಕಿಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News