×
Ad

ಮೆಟ್ರೋ ಕಾಮಗಾರಿ ವೇಳೆ ರಸ್ತೆಯಲ್ಲೇ ಅನಿಲ ಸೋರಿಕೆ: ಆತಂಕಗೊಂಡ ಜನರು

Update: 2018-10-29 22:40 IST

ಬೆಂಗಳೂರು, ಅ.29: ನಮ್ಮ ಮೆಟ್ರೋ ಕಾಮಗಾರಿ ವೇಳೆ ದಿಢೀರ್ ಗ್ಯಾಸ್ ಪೈಪ್ ಲೈನ್‌ನಲ್ಲಿ ಅನಿಲ ಸೋರಿಕೆಯಾಗಿ ಕೆಲ ಗಂಟೆಗಳ ಕಾಲ ಜನರಲ್ಲಿ ಆತಂಕ ಉಂಟಾಗಿತ್ತು.

ಸೋಮವಾರ ಮುಂಜಾನೆ ನಗರದ ಹೊರವಲಯ ಕೆ.ಆರ್.ಪುರಂ ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಕಾಮಗಾರಿಯ ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದಂತಹ 70 ಕಿಲೋ ಫೋರ್ಸ್ನ ಗ್ಯಾಸ್ ಪೈಪ್ ಲೈನ್‌ನಲ್ಲಿ ಸೋರಿಕೆ ಉಂಟಾಗಿದ್ದು, ಇದರಿಂದ ಕೆಲ ಗಂಟೆಗಳ ಕಾಲ ಅಲ್ಲಿನ ಸಾರ್ವಜನಿಕರಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿತ್ತು.

ಐಟಿಪಿಎಲ್ ಪ್ರಮುಖ ರಸ್ತೆಯಲ್ಲಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಜೊತೆಗೆ ಸುತ್ತಮುತ್ತ ಮೊಬೈಲ್ ಬಳಕೆಯನ್ನು ಸಹ ನಿಷೇಧಿಸಲಾಗಿತ್ತು. ಸಮಸ್ಯೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಸೋರಿಕೆ ನಿಲ್ಲಿಸಲು ಹರಸಾಹಸ ಪಡಬೇಕಾಯಿತ್ತು. ನಂತರ ಕೆಲ ಗಂಟೆಗಳ ಬಳಿಕ ಗ್ಯಾಸ್ ಪೈಪ್ ಸೋರಿಕೆ ನಿಲ್ಲಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News