×
Ad

‘ನಿಮ್ಮ ಮಗನ ಸಾವು ನಿಮಗೆ ದೇವರು ಕೊಟ್ಟ ಶಿಕ್ಷೆ’ ಎಂಬ ರೆಡ್ಡಿ ಹೇಳಿಕೆಗೆ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಏನು?

Update: 2018-10-30 18:41 IST

ಬೆಂಗಳೂರು, ಅ.30: ತಮ್ಮ ಹಿರಿಯ ಪುತ್ರನ ಸಾವಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಡಿರುವ ಟೀಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ’ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ನಿಮ್ಮ ಮಕ್ಕಳಿಗೆ ದೇವರು ಶಿಕ್ಷೆಯನ್ನು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ಜನಾರ್ದನ ರೆಡ್ಡಿ, ‘ಸಿದ್ದರಾಮಯ್ಯನವರಿಂದ ನಾನು ನಾಲ್ಕು ವರ್ಷ ನನ್ನ ಮಕ್ಕಳಿಂದ ದೂರ ಇರುವಂತಾಯಿತು. ಅದಕ್ಕೆ ಪ್ರತಿಯಾಗಿ ಅವರ ಮಗನನ್ನು ಕಳೆದುಕೊಂಡು ನಾನು ಪಟ್ಟ ಸಂಕಟವನ್ನು ಅವರು ಈಗ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News