×
Ad

ವಿಂಗ್ ಕಮಾಂಡರ್ ಬಿ.ಆರ್.ಮಾಧವರಾವ್ ನಿಧನ

Update: 2018-10-30 21:49 IST

ಬೆಂಗಳೂರು, ಅ.30: ವಿಂಗ್ ಕಮಾಂಡರ್ ಬಿ.ಆರ್.ಮಾಧವ ರಾವ್ (84) ಮಂಗಳವಾರ (ಅ.30) ನಗರದ ಕೋರಮಂಗಲದ ತಮ್ಮ ನಿವಾಸದಲ್ಲಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ. ಅಂತ್ಯಕ್ರಿಯೆ ನವೆಂಬರ್ 1ರಂದು ಬೆಳಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಧವ ರಾವ್ ಅವರು, ಭಾರತೀಯ ವಾಯು ಸೇನೆಗೆ 1960ರ ಜೂನ್ 21ರಂದು ಸೇರ್ಪಡೆ ಆಗಿದ್ದರು. ತಾಂತ್ರಿಕ ವಿಭಾಗದಲ್ಲಿನ ಅವರ ಪರಿಣತಿಗೆ ಭಾರತ ಸರಕಾರ 1977ರಲ್ಲಿ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News