ಬಿಎಂಟಿಸಿ: ನ.15ರ ನಂತರ ವಿದ್ಯಾರ್ಥಿ ಪಾಸ್ ಕಡ್ಡಾಯ

Update: 2018-10-30 16:21 GMT

ಬೆಂಗಳೂರು, ಅ.30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2018-19ನೆ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿಗಾಗಿ ಆನ್‌ಲೈನ್ ಮೂಲಕ ಅಪ್ಲಿಕೇಷನ್ www.mybmtc.com, http://www.mybmtc.com ನಲ್ಲಿ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿ ಪಾಸ್ ಪಡೆಯದಿರುವವರು ನ.15ರೊಳಗೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಈಗಾಗಲೇ ಶೇ.90 ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್‌ಕಾರ್ಡ್ ಮಾದರಿಯ ವಿದ್ಯಾರ್ಥಿ ಪಾಸುಗಳನ್ನು ಪಡೆದಿರುತ್ತಾರೆ. ಉಳಿದ ಶೇ.10 ರಷ್ಟು ವಿದ್ಯಾರ್ಥಿಗಳು ಪಾಸನ್ನು ಪಡೆಯಬೇಕಾಗಿದ್ದು, ಪ್ರಸ್ತುತ ಪಾಸಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದ್ದರಿಂದ ಸಂಸ್ಥೆಯು ಸದರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾಸ್‌ಗಾಗಿ ಅರ್ಜಿ ಸಲ್ಲಿಸಿದ ಸ್ವೀಕೃತಿ ಮತ್ತು ಕಾಲೇಜಿನ ಗುರುತಿನ ಚೀಟಿಯೊಂದಿಗೆ ವಿದ್ಯಾರ್ಥಿಗಳ ವಾಸಸ್ಥಳದಿಂದ ಶಾಲಾ/ಕಾಲೇಜಿನವರೆಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿ ಪಾಸನ್ನು ಪಡೆಯದ ವಿದ್ಯಾರ್ಥಿಗಳು ನ.15ರ ಒಳಗಾಗಿ ಅರ್ಜಿ ಸಲ್ಲಿಸಿ ಪಾಸುಗಳನ್ನು ಪಡೆದು, ವಿದ್ಯಾರ್ಥಿ ಪಾಸಿನೊಂದಿಗೆ ಪ್ರಯಾಣಿಸುವುದು ಕಡ್ಡಾಯವೆಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News