×
Ad

ಗ್ರೇಟ್ ಸ್ಪೋರ್ಟ್ಸ್ ಇನ್ ಫ್ರಾ ಸಂಸ್ಥೆಗೆ ವೃತ್ತಿಪರ ಸೇವಾ ಸಂಸ್ಥೆ ಪ್ರಶಸ್ತಿ

Update: 2018-10-30 22:12 IST

ಬೆಂಗಳೂರು, ಅ.30: ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟವು ನೀಡುವ ಅತ್ಯುತ್ತಮ ವೃತ್ತಿಪರ ಸೇವಾ ಸಂಸ್ಥೆ 2018ರ ಸಾಲಿನ ಪ್ರಶಸ್ತಿಯನ್ನು ಗ್ರೇಟ್ ಸ್ಪೋರ್ಟ್ಸ್ ಇನ್ ಫ್ರಾ ಸಂಸ್ಥೆ ಪಡೆದುಕೊಂಡಿದೆ.

ಈ ಪ್ರಶಸ್ತಿಯನ್ನು ಭಾರತೀಯ ಕ್ರೀಡಾಭಿವೃದ್ಧಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಮತ್ತು ಸಾಧನೆ ಸೇವೆ ಸಲ್ಲಿಸಿರುವಂತಹ ಕ್ರೀಡಾ ಸಾಧಕರು, ಕ್ರೀಡಾ ಅಭಿಮಾನಿಗಳಿಗೆ ನೀಡಿ ಗೌರವಿಸಲಾಗುತ್ತದೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ವತಿಯಿಂದ ಆಯೋಜಿಸುವ ಫಿಕಿ ಟರ್ಫ್ 2018ನೇ ಸಾಲಿನ 8ನೇ ಅಂತರ್‌ರಾಷ್ಟ್ರೀಯ ಕ್ರೀಡಾ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ರಾಜ್ಯ ಸಂಸದೀಯ ವ್ಯವಹಾರಗಳ ಸಚಿವರಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News