ನಾಗರತ್ನ ಎಸ್. ಭಟ್
Update: 2018-10-31 19:49 IST
ಉಡುಪಿ, ಅ. 31: ನೀಲಾವ ಮಹಿಷಮರ್ದಿನೀ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಭಟ್ ಅವರ ಪತ್ನಿ ನಾಗರತ್ನ ಎಸ್. ಭಟ್ (69) ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು.
ಮೃತರು ಪತಿ, ಮಣಿಪಾಲದ ಸ್ಟೆಂಪ್ಯೂಟಿಕ್ಸ್ ರಿಸರ್ಚ್ ಸಂಸ್ಥೆ ಮುಖ್ಯಸ್ಥ ಡಾ. ರವಿರಾಜ ಎನ್.ಎಸ್. ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ. ನಾಗರತ್ನ ಭಟ್ ಸುಮಾರು ಮೂರು ದಶಕಗಳ ಕಾಲ ನೀಲಾವರ ಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.