ವಿಧಾನಸಭೆಗೆ ವಿನಿಷಾ ನಿರೋ ನಾಮನಿರ್ದೇಶನ
Update: 2018-10-31 21:25 IST
ಬೆಂಗಳೂರು, ಅ.31: ಭಾರತ ಸಂವಿಧಾನದ ಅನುಚ್ಛೇದ 333ರ ಮೇರೆಗೆ ರಾಜ್ಯಪಾಲರು ವಿನಿಷಾ ನಿರೋ ಅವರನ್ನು ಅ.30ರಿಂದ ಜಾರಿಗೆ ಬರುವಂತೆ 15ನೇ ರಾಜ್ಯ ವಿಧಾನಸಭೆಗೆ ಆಂಗ್ಲೊ-ಇಂಡಿಯನ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿನಿಷಾ ನಿರೋ ಬುಧವಾರ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ಅವರ ಕಚೇರಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿನಿಷಾ ನಿರೋ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದಲ್ಲಿಯೂ ಆಂಗ್ಲೊ- ಇಂಡಿಯನ್ ಸದಸ್ಯರಾಗಿ ನಾಮ ನಿರ್ದೇಶನ ಗೊಂಡಿದ್ದರು.