ವಾಟ್ಸ್ ಆ್ಯಪ್ ಬಳಕೆದಾರರಿಗೆ ಸ್ಟೇಟಸ್ ಸೆಕ್ಷನ್ ನಲ್ಲಿ ಕಾಣಿಸಿಕೊಳ್ಳಲಿದೆ ಹೊಸ ತಲೆನೋವು ?

Update: 2018-10-31 17:04 GMT

ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್ , ಇನ್ ಸ್ಟಾಗ್ರಾಂ ಮುಂತಾದವುಗಳು ಇಂದು ಜನರ ಬದುಕಿನ ಭಾಗವಾಗಿಬಿಟ್ಟಿದೆ. ಸುದ್ದಿ, ಗಾಸಿಪ್, ಹಾಡು, ಕವನ ಹೀಗೆ ಎಲ್ಲಾ ವಿಷಯಗಳಿಗೂ ಜನರು ಆಶ್ರಯಿಸುವುದು ಸಾಮಾಜಿಕ ಜಾಲತಾಣವನ್ನೇ. ಇದೀಗ ವಾಟ್ಸ್ ಆ್ಯಪ್ ನೀಡಿರುವ ಹೊಸ ಫೀಚರ್ ನ ಅಪ್ ಡೇಟ್ ನಿತ್ಯ ಬಳಕೆದಾರರಿಗೆ ತಲೆನೋವಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಹೌದು ಇನ್ನು ಕೆಲವೇ ದಿನಗಳಲ್ಲಿ ವಾಟ್ಸ್ ಆ್ಯಪ್ ನ ಸ್ಟೇಟಸ್ ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ.

ಸಾಮಾಜಿಕ ಜಾಲತಾಣದ ಬಳಕೆಯ ಸಂದರ್ಭ ಜಾಹೀರಾತುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಇನ್ನು ಸದಾ ಬಳಕೆಯ ವಾಟ್ಸ್ ಆ್ಯಪನ್ನು ಈ ತಲೆನೋವು ಅಪ್ಪಿಕೊಂಡರೆ…. ಕಾದು ನೋಡಬೇಕು.

“ವಾಟ್ಸ್ ಆ್ಯಪನ್ನು ಮಾನೆಟೈಝ್ ಮಾಡಲು ಫೇಸ್ ಬುಕ್ ನಿರ್ಧರಿಸಿದೆ. ಆ್ಯಪ್ ನ ಸ್ಟೇಟಸ್ ಸೆಕ್ಷನ್ ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಲಿದೆ” ಎಂದು ವಾಟ್ಸ್ ಆ್ಯಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್ ಹೇಳಿದ್ದಾರೆ. ಹೀಗೆ ಕಾಣಿಸಿಕೊಳ್ಳುವ ಜಾಹೀರಾತುಗಳ ಕಂಪೆನಿಯಿಂದ ಫೇಸ್ ಬುಕ್ ಹಣ ಪಡೆದುಕೊಳ್ಳಲಿದೆ. ಜಾಹೀರಾತುದಾರರ ಪ್ರೊಫೈಲ್ ಜೊತೆಗೆ ಈ ಜಾಹೀರಾತುಗಳು ಇಂಟರ್ ಲಿಂಕ್ ಆಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News