ಹಬ್ಬಕ್ಕೆ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಇದನ್ನೊಮ್ಮೆ ಓದಿ.....

Update: 2018-11-03 11:13 GMT

ಹಬ್ಬದ ಸಂಭ್ರಮ ಮತ್ತೆ ಬಂದಿದೆ. ಆನ್‌ಲೈನ್ ಖರೀದಿಗೆ ಹೆಚ್ಚಿನವರು ಸಜ್ಜಾಗಿದ್ದಾರೆ,ಆದರೆ ಕೆಲವೇ ಜನರು ಮಾತ್ರ ಒಳ್ಳೆಯ ಆಫರ್‌ಗಳನ್ನು ಪಡೆದುಕೊಳ್ಳುವಲ್ಲಿ ಮತ್ತು ತಮ್ಮ ಉಳಿತಾಯವನ್ನು ಗರಿಷ್ಠಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಹಬ್ಬದ ಮಾರಾಟ ಸಂದರ್ಭಗಳಲ್ಲಿ ಮಾತ್ರವಲ್ಲ,ನೀವು ಪ್ರತಿ ಬಾರಿಯೂ ಆನ್‌ಲೈನ್ ಖರೀದಿಯನ್ನು ಮಾಡುವಾಗ ಅತ್ಯುತ್ತಮ ರಿಯಾಯಿತಿಗಳನ್ನು ಪಡೆದುಕೊಳ್ಳಲು ಕೆಲವು ಟಿಪ್ಸ್ ಇಲ್ಲಿವೆ.....

► ಇನ್‌ಕಾಗ್ನಿಷಿಯೊ ಶಾಪಿಂಗ್ ಮಾಡಿ

ಹಲವಾರು ಆನ್‌ಲೈನ್ ಮಾರಾಟ ತಾಣಗಳು ಗ್ರಾಹಕನ ಇರುವಿಕೆಯ ತಾಣ,ಬ್ರೌಸಿಂಗ್ ಇತಿಹಾಸ ಮತ್ತು ಹಿಂದಿನ ಶಾಪಿಂಗ್ ಅನ್ನು ಆಧರಿಸಿ ಬೆಲೆಗಳನ್ನು ಪ್ರಕಟಿಸುತ್ತವೆ. ಅಂದರೆ ನೀವು ಹಳೆಯ ಗ್ರಾಹಕರಾಗಿದ್ದರೆ ಈ ವೆಬ್ ಸೈಟ್‌ಗಳು ನಿಮ್ಮನ್ನು ಗುರುತಿಸುತ್ತವೆ ಮತ್ತು ಅದಕ್ಕನುಗುಣವಾಗಿ ಬೆಲೆಗಳು ಬದಲಾಗುತ್ತವೆ. ಈ ತಾಣಗಳು ಕೇವಲ ಹೊಸ ಗ್ರಾಹಕರಿಗೆ ರಿಯಾಯಿತಿಗಳು ಮತ್ತು ರಿವಾರ್ಡ್‌ಗಳನ್ನು ನೀಡುವ ಮೂಲಕ ಅವರನ್ನು ಸೆಳೆಯಲು ಯತ್ನಿಸುತ್ತವೆ. ಆದರೆ ಇದನ್ನು ನಿವಾರಿಸಲು ಮಾರ್ಗಗಳಿವೆ. ಪ್ರೈವೇಟ್ ವಿಂಡೊವನ್ನು ತೆರೆಯುವ ಮೂಲಕ ಇನ್‌ಕಾಗ್ನಿಷಿಯೊ ಆಗಿ ಅಥವಾ ನಿಮ್ಮ ಬ್ರೌಸಿಂಗ್ ಹಿಸ್ಟರಿ ಮತ್ತು ಕುಕೀಸ್‌ನ್ನು ನಿರಂತರವಾಗಿ ಅಳಿಸುವ ಮೂಲಕ ಶಾಪಿಂಗ್ ಮಾಡಬಹುದು. ಹಲವಾರು ಇ-ಮೇಲ್ ಐಡಿಗಳು ಅಥವಾ ನಿಮ್ಮ ಕುಟುಂಬದ ವಿವಿಧ ಸದಸ್ಯರ ಪೋನ್‌ಗಳನ್ನು ಬಳಸುವುದು ‘ಮೊದಲ ಬಳಕೆದಾರ’ ಅಥವಾ ‘ಹೊಸ ಗ್ರಾಹಕರ’ ರಿಯಾಯಿತಿಗಳನ್ನು ಪಡೆದುಕೊಳ್ಳಲು ಇನ್ನೊಂದು ಮಾರ್ಗವಾಗಿದೆ.

► ಕೂಪನ್‌ಕೋಡ್‌ಗಳಿಗಾಗಿ ಬ್ರೌಸರ್ ಎಕ್ಸ್‌ಟೆನ್ಷನ್‌ಗಳನ್ನು ಸೇರಿಸಿಕೊಳ್ಳಿ

ಕ್ರೋಮ್ ಮತ್ತು ಫೈರ್‌ಫಾಕ್ಸ್‌ಗಳಿಗಾಗಿ ಬಯ್‌ಹಾಟ್ಕೆ, ಶಾಪ್‌ಸ್ಮಾರ್ಟ್, ಆಫ್ಟರ್‌ಕೂಪನ್ ಇಂಡಿಯಾ ಮತ್ತು ಮಖ್ಖಿಚಾಯ್ಸಿನಂತಹ ಕೆಲವು ಬ್ರೌಸರ್ ಎಕ್ಸ್‌ಟೆನ್ಷನ್‌ಗಳಿವೆ. ಇವು ರಿಯಾಯಿತಿಗಳು ಮತ್ತು ಕೂಪನ್ ಕೋಡ್‌ಗಳನ್ನು ಆಟೊಮ್ಯಾಟಿಕ್ ಆಗಿ ಸ್ಕಾನ್ ಮಾಡುತ್ತವೆ ಮತ್ತು ನೀವು ಇ-ಕಾಮರ್ಸ್ ವೆಬ್‌ಸೈಟ್‌ನ್ನು ಪರಿಶೀಲಿಸುವ ಮುನ್ನ ಅವುಗಳನ್ನು ಅನ್ವಯಿಸುತ್ತವೆ. ಅಂದರೆ ಡಿಸ್ಕೌಂಟ್ ಕೂಪನ್‌ಗಳಿಗಾಗಿ ನೀವು ಹಲವಾರು ವೆಬ್‌ಸೈಟ್‌ಗಳನ್ನು ಜಾಲಾಡಬೇಕಿಲ್ಲ.

► ಬೆಲೆ ಹೋಲಿಕೆ ತಾಣಗಳನ್ನು ಪರಿಶೀಲಿಸಿ

ಮೈಸ್ಮಾರ್ಟ್‌ಪ್ರೈಸ್,ಕಂಪ್ಯಾರ್‌ರಾಜಾ,ಪ್ರೈಸ್‌ದೇಖೊ,ಬಯ್‌ಹಾಟ್ಕೆ ಮತ್ತು ಸ್ಮಾರ್ಟ್‌ಪಿಕ್ಸ್‌ನಂತಹ ಹಲವಾರು ಬೆಲೆ ಹೋಲಿಕೆ ವೆಬ್‌ಸೈಟ್‌ಗಳಿದ್ದು,ಇವು ವಿವಿಧ ಆನ್‌ಲೈನ್ ಮಾರಾಟತಾಣಗಳಲ್ಲಿಯ ಬೆಲೆಗಳನ್ನು ಹೋಲಿಸಲು ಮತ್ತು ಕಡಿಮೆ ಬೆಲೆಯ ತಾಣವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುತ್ತವೆ. ಈ ಪೈಕಿ ಕೆಲವು ವೆಬ್‌ಸೈಟ್‌ಗಳು ರಿಯಲ್ ಟೈಮ್ ಬೆಲೆಗಳನ್ನೂ ತೋರಿಸುತ್ತವೆ. ಅಂದರೆ ನೀವು ಉತ್ಪನ್ನವೊಂದಕ್ಕಾಗಿ ಶಾಪಿಂಗ್ ಮಾಡುತ್ತಿರುವಾಗ ಕಡಿಮೆ ಬೆಲೆಯು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್ ಫೋನ್‌ಗಳು,ಹೋಟೆಲ್‌ಗಳು,ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಇತ್ಯಾದಿ ನಿರ್ದಿಷ್ಟ ಉತ್ಪನ್ನಗಳು ಮತ್ತು ಸೇವೆಗಳನ್ನು ಹೋಲಿಕೆ ಮಾಡಲೂ ವೆಬ್‌ಸೈಟ್‌ಗಳಿವೆ.

ಈ ಪೈಕಿ ಕೆಲವು ಸೈಟ್‌ಗಳು ಪ್ರೈಸ್ ಅಲರ್ಟ್‌ಗಳನ್ನು ನೀಡುತ್ತವೆ. ಅಂದರೆ ನಿಮ್ಮ ಇಷ್ಟದ ಉತ್ಪನ್ನದ ಬೆಲೆ ಇಳಿದಾಗೆಲ್ಲ ಅವು ನಿಮಗೆ ನೋಟಿಫಿಕೇಷನ್ ರವಾನಿಸುತ್ತವೆ. ಬಯ್‌ಹಾಟ್ಕೆಯಂತಹ ಕೆಲವು ಸೈಟ್‌ಗಳು ನಿಮಗೆ ಬೆಲೆ ಇತಿಹಾಸವನ್ನು ಒದಗಿಸುವ ಮೂಲಕ ಖರೀದಿಗೆ ಅತ್ಯುತ್ತಮ ಸಮಯ ಯಾವುದು ಎನ್ನುವುದನ್ನು ತಿಳಿದುಕೊಳ್ಳಲು ನಿಮಗೆ ನೆರವಾಗುತ್ತವೆ.

► ಡಿಸ್ಕೌಂಟ್ ಮತ್ತು ಕೂಪನ್ ಸೈಟ್‌ಗಳನ್ನು ಪರಿಶೀಲಿಸಿ

 ಕೂಪನ್ ಕೋಡ್‌ಗಳಿಗಾಗಿ ನೀವು ಬ್ರೌಸರ್ ಎಕ್ಸ್‌ಟೆನ್ಷನ್‌ಗಳನ್ನು ಇನ್‌ಸ್ಟಾಲ್ ಮಾಡಬಹುದಾದರೂ ಇಂತಹ ರಿಯಾಯಿತಿಗಳು ಮತ್ತು ಕೂಪನ್ ಕೋಡ್‌ಗಳ ಕೊಡುಗೆಯನ್ನು ನೀಡುವ ವೆಬ್‌ಸೈಟ್‌ಗಳನ್ನು ಪರಿಶೀಲಿಸುವುದು ಅಥವಾ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಕೂಡ ಒಳ್ಳೆಯ ಉಪಾಯವಾಗಿದೆ. ಕೂಪನ್‌ದುನಿಯಾ, ಕೂಪನ್ಝ್‌ಗುರು, ಗ್ರೇಟ್‌ಬಯ್ಝ್, ಫ್ರೀಕೂಪನ್‌ಇಂಡಿಯಾ,ಮೈಟೋಕ್ರಿ ಮತ್ತು ವನ್‌ಇಂಡಿಯಾದಂತಹ ಕೆಲವು ವೆಬ್‌ಸೈಟ್‌ಗಳು ವಿಶಾಲ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಕೂಪನ್‌ಗಳ ಕೊಡುಗೆಯನ್ನು ನೀಡುತ್ತವೆ. ಉತ್ಪನ್ನಗಳ ವರ್ಗಗಳನ್ನು ಆಧರಿಸಿ ಅಥವಾ ಮೈಂತ್ರಾ,ಫ್ಲಿಪ್ ಕಾರ್ಟ್,ಅಮಝಾನ್,ಜಬಾಂಗ್,ಗೋಇಬಿಬೋ,ಸ್ವಿಗ್ಗಿ ಮತ್ತು ಯಾತ್ರಾದಂತಹ ಆನ್‌ಲೈನ್ ಸ್ಟೋರ್‌ಗಳು ಮತ್ತು ಆ್ಯಪ್‌ಗಳಲ್ಲಿ ಒಳ್ಳೆಯ ಡೀಲ್‌ಗಳಿಗಾಗಿ ನೀವು ಕಣ್ಣಾಡಿಸಬಹುದು. ಕೂಪನ್‌ಗಳ ಜೊತೆಗೆ ಗಿಫ್ಟ್ ಕಾರ್ಡ್‌ಗಳು,ವಿಶೇಷ ಡೀಲ್‌ಗಳು ಮತ್ತು ಇತರ ಕೊಡುಗೆಗಳ ಲಾಭಗಳನ್ನೂ ನೀವು ಪಡೆಯಬಹುದು. ಗ್ರಾಬ್‌ಆನ್, ನಿಯರ್‌ಬಯ್, ಕೂಪನ್‌ದುನಿಯಾ,ಬ್ಲೂಬುಕ್ ಮತ್ತು ದೇಸಿಡೈಮ್ ಇವು ರಿಯಾಯಿತಿಗಳು ಮತ್ತು ಕೂಪನ್‌ಗಳನ್ನು ನೀಡುವ ಕೆಲವು ಆ್ಯಪ್‌ಗಳಾಗಿವೆ.

► ಕ್ಯಾಷ್‌ಬ್ಯಾಕ್ ಆ್ಯಪ್ಸ್,ಸೈಟ್‌ಗಳನ್ನು ಬಳಸಿ

ಶಾಪಿಂಗ್ ಮಾಡುವಾಗ ಗೋಪೈಸಾ,ಕ್ರೌನಿಟ್,ನಿಯರ್‌ಬಯ್,ಟಾಪ್ಝೋ ಮತ್ತು ಮ್ಯಾಜಿಕ್‌ಪಿನ್‌ನಂತಹ ಕ್ಯಾಷ್‌ಬ್ಯಾಕ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನೀವು ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸಬಹುದು. ಇವು ಅಮಝಾನ್,ಫ್ಲಿಪ್‌ಕಾರ್ಟ್,ಸ್ನಾಪ್‌ಡೀಲ್,ಜಬಾಂಗ್,ಟಾಟಾಕ್ಲಿಕ್‌ನಂತಹ ಮುಖ್ಯ ಆನ್‌ಲೈನ್ ವೇದಿಕೆಗಳಲ್ಲಿ ಶಾಪಿಂಗ್‌ಗೆ ಅವಕಾಶ ಕಲ್ಪಿಸುವ ಜೊತೆಗೆ ಕೂಪನ್‌ಗಳು,ರಿಯಾಯಿತಿಗಳು ಮತ್ತು ಇತರ ಡೀಲ್‌ಗಳ ಕೊಡುಗೆಯನ್ನೂ ನೀಡುತ್ತವೆ. ನೀವು ಇವುಗಳನ್ನು ರೆಸ್ಟೋರಂಟ್,ಸಲೂನ್,ಸ್ಪಾ ಮತ್ತು ದಿನಸಿ ಅಂಗಡಿಗಳಲ್ಲಿಯೂ ಬಳಸಬಹುದು. ಆ್ಯಪ್‌ಗಳ ಜೊತೆಗೆ ಟಾಪ್ ಕ್ಯಾಷ್‌ಬ್ಯಾಕ್, ಕ್ಯಾಷ್‌ಕರೋ,ಪೈಸಾವಾಪಸ್,ಸಿತಾಫಲ್ ಮತ್ತು ಕ್ಯಾಷ್2ಕಾರ್ಟ್‌ನಂತಹ ಕ್ಯಾಷ್‌ಬ್ಯಾಕ್ ವೆಬ್‌ಸೈಟ್‌ಗಳನ್ನೂ ನೀವು ಪರಿಶೀಲಿಸಬಹುದು.

► ಶಾಪಿಂಗ್ ಕಾರ್ಟ್‌ನ್ನು ತೊರೆದುಬಿಡಿ

 ಆನ್‌ಲೈನ್ ಶಾಪಿಂಗ್ ಮಾಡುವಾಗ ನಮಗೆ ಬೇಕಾದ ವಸ್ತುವನ್ನು ಶಾಪಿಂಗ್ ಕಾರ್ಟ್‌ನಲ್ಲಿ ಲೋಡ್ ಮಾಡಿ ಬಳಿಕ ಹಣವನ್ನು ಪಾವತಿಸದೆ ಕಾರ್ಟ್‌ನ್ನು ಅಲ್ಲಿಯೇ ಬಿಡುವುದು ಹೆಚ್ಚಿನ ರಿಯಾಯಿತಿಗಳನ್ನು ಪಡೆದುಕೊಳ್ಳಲು ಜನಪ್ರಿಯ ತಂತ್ರವಾಗಿದೆ. ಕೆಲವು ದಿನಗಳ ಬಳಿಕ ವೆಬ್‌ಸೈಟ್ ನಿಮಗೆ ನಿಮ್ಮ ಕಾರ್ಟ್ ಬಗ್ಗೆ ನೆನಪಿಸುತ್ತದೆ ಮತ್ತು ಅವುಗಳನ್ನು ಖರೀದಿಸಲು ಹೆಚ್ಚಿನ ರಿಯಾಯಿತಿ ಅಥವಾ ಉಚಿತ ಕೊಡುಗೆಯ ಆಮಿಷವನ್ನೊಡ್ಡುತ್ತದೆ ಎನ್ನುವುದು ಈ ತಂತ್ರದ ಹಿಂದಿನ ಐಡಿಯಾ ಆಗಿದೆ. ಎಲ್ಲ ವೆಬ್‌ಸೈಟ್‌ಗಳೂ ಈ ತಂತ್ರಕ್ಕೆ ಮಣಿಯುವುದಿಲ್ಲವಾದರೂ ಪ್ರಯತ್ನಿಸಿ ನೋಡುವುದರಲ್ಲಿ ಯಾವುದೇ ಹಾನಿಯಿಲ್ಲ.

► ಬ್ರಾಂಡ್‌ಗಳ ಜಾಡು ಹಿಡಿಯಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿ

ನೀವು ಬ್ರಾಂಡ್‌ಗಳು ಮತ್ತು ಸ್ಟೋರ್‌ಗಳನ್ನು ಆಯ್ಕೆ ಮಾಡುವವರಾದರೆ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೊ ಮಾಡಲು ಆರಂಭಿಸಿ. ಅವು ಇದಕ್ಕಾಗಿಯೇ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಪೇಜ್‌ಗಳನ್ನು ಮೀಸಲಿರಿಸಿವೆ ಮತ್ತು ಫ್ಲಾಷ್ ಸೇಲ್ ಅಥವಾ ರಿಯಾಯಿತಿಗಳ ಬಗ್ಗೆ ಮಾಹಿತಿಗಳನ್ನು ಈ ಪುಟಗಳಲ್ಲಿ ಮೊದಲು ಪೋಸ್ಟ್ ಮಾಡುತ್ತವೆ.

► ಮೊಬೈಲ್ ವ್ಯಾಲೆಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ

ಹೆಚ್ಚಿನ ಆನ್‌ಲೈನ್ ಮಾರಾಟ ತಾಣಗಳು ಕಾರ್ಡ್ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಹೊಂದಿವೆ ಮತ್ತು ವರ್ಷವಿಡೀ ಹೋಟೆಲ್‌ನಲ್ಲಿ ಊಟ,ವಿಮಾನ ಟಿಕೆಟ್‌ಗಳ ಬುಕಿಂಗ್ ಮತ್ತು ಇತರ ಸೇವೆಗಳ ಮೇಲೆ ಆಕರ್ಷಕ ಡೀಲ್‌ಗಳನ್ನು ನೀಡುತ್ತವೆ. ಇದೇ ರೀತಿ ಪೇಟಿಎಂ,ಮೊಬಿಕ್ವಿಕ್‌ನಂತಹ ಮೊಬೈಲ್ ವ್ಯಾಲೆಟ್‌ಗಳ ಮೂಲಕ ಶಾಪಿಂಗ್ ಮಾಡುವುದರಿಂದ ಉತ್ತಮ ರಿಯಾಯಿತಿಗಳು ಮತ್ತು ಕ್ಯಾಷ್‌ಬ್ಯಾಕ್ ಕೊಡುಗೆಗಳನ್ನು ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News