ರಫೇಲ್ ಡೀಲ್ ಬಗ್ಗೆ ಮೋದಿ, ಕೇಂದ್ರ ಸಚಿವರ ಸುಳ್ಳುಗಳನ್ನು ಬಹಿರಂಗಪಡಿಸಿದ ಡಸಾಲ್ಟ್ ಸಿಇಒ ಸಂದರ್ಶನ

Update: 2018-11-03 12:23 GMT

ಡಸಾಲ್ಟ್ ಏವಿಯೇಶನ್ ಸಿಇಒ ಎರಿಕ್ ಟ್ರ್ಯಾಪಿಯರ್ ಈ ವಾರ ಸಿಎನ್‍ಬಿಸಿ- ಟಿವಿ 18ಗೆ ನೀಡಿದ ಸಂದರ್ಶನ, ಬಹುಚರ್ಚಿತ ರಫೇಲ್ ಒಪ್ಪಂದದ ಬಗ್ಗೆ ಭಾರತದಲ್ಲಿ ಎದ್ದಿರುವ ಎಲ್ಲ ಸಂದೇಹಗಳಿಗೆ ಉತ್ತರ ನೀಡಿದೆ. ಎರಿಕ್ ನೀಡಿರುವ ಅಭಿಪ್ರಾಯಗಳು, 36 ಯುದ್ಧವಿಮಾನಗಳ ಖರೀದಿಗೆ ಫ್ರಾನ್ಸ್ ಜತೆ ಮಾಡಿಕೊಂಡ ಒಪ್ಪಂದವನ್ನು ಸಮರ್ಥಿಸುತ್ತಾ ಬಂದಿರುವ ಮೋದಿ ಸರ್ಕಾರ ಮತ್ತು ಅದರ ಸಚಿವರ ವಾದಕ್ಕೆ ವಿರುದ್ಧವಾಗಿವೆ.

ಈ ವಿಷಯದ ಬಗ್ಗೆ ವಿವಾದ ಎಬ್ಬಿಸಿರುವ ಮತ್ತು ಪ್ರಶ್ನಾರ್ಹವಾದ ಎಂಟು ಅಂಶಗಳನ್ನು ಸಂದರ್ಶನದಲ್ಲಿ ಪ್ರಸ್ತಾಪಿಸಲಾಗಿದ್ದು, ಟ್ರ್ಯಾಪಿಯರ್ ಅವರ ಉತ್ತರಗಳು ವಿವಾದದ ರಾಡಿಯನ್ನು ಮತ್ತಷ್ಟು ಕಲಕಿದ್ದು, ಸರ್ಕಾರ, ಬಿಜೆಪಿ ಮುಖಂಡರು, ಅನಿಲ್ ಅಂಬಾನಿ ಮತ್ತು ಸ್ವತಃ ಡಸಾಲ್ಟ್ ಇದುವರೆಗೆ ಪ್ರತಿಪಾದಿಸುತ್ತಾ ಬಂದಿರುವ ಅಂಶಗಳನ್ನು ದುರ್ಬಲಗೊಳಿಸಿವೆ.

1. ಒಪ್ಪಂದದ ಕಾಲಾವಧಿ ಮತ್ತು ಪ್ರಕ್ರಿಯೆ ಬಗೆಗಿನ ಪ್ರಶ್ನೆ

ಸಂದರ್ಶನದ ಆರಂಭದಲ್ಲಿ ಟ್ರ್ಯಾಪಿಯರ್ ಅವರಿಗೆ 126 ವಿಮಾನಗಳ ಮಾರಾಟ ಕುರಿತ ಮಾತುಕತೆಯ ಸ್ಥಿತಿಗತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು 2015ರ ಏಪ್ರಿಲ್ 10ರಂದು ಮಾಡಿದ ಘೋಷಣೆಗೆ ಪೂರ್ವಭಾವಿಯಾಗಿ ಈ ಮಾತುಕತೆ ನಡೆದಿದ್ದು, ಅಂತಿಮವಾಗಿ ಮಧ್ಯಮ ಪ್ರಮಾಣದ ಬಹುಪಾತ್ರ ಯುದ್ಧವಿಮಾನ (ಎಂಎಂಆರ್‍ಸಿಎ) ಒಪ್ಪಂದ ಮಾತುಕತೆ ಕೈಬಿಡಲಾಗಿತ್ತು. "ನಾವು 2012ರಿಂದ 2015ರವರೆಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದೆವು" ಎಂದು ಟ್ರ್ಯಾಪಿಯರ್ ಸ್ಪಷ್ಟಪಡಿಸಿದರು. "ನೀವು ಉಲ್ಲೇಖಿಸಿದ ಮೋದಿ ಪ್ಯಾರಿಸ್ ಭೇಟಿ ಸಂದರ್ಭದಲ್ಲಿ, ಅದು ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳ ನಡುವಿನ ಮಾತುಕತೆಯಾಗಿತ್ತು. ಇದರಲ್ಲಿ ಡಸಾಲ್ಟ್ ಪಾಲ್ಗೊಂಡಿರಲಿಲ್ಲ. ಆದರೆ ಸಂಜೆ ಪತ್ರಿಕಾಗೋಷ್ಠಿಯ ವೇಳೆ 36 ಯುದ್ಧವಿಮಾನಗಳಷ್ಟೇ ಈಗ ಭಾರತ ಹಾಗೂ ಫ್ರಾನ್ಸ್‍ನ ಮುಂದಿರುವ ಆಯ್ಕೆ ಎಂದು ನಮಗೆ ತಿಳಿಸಲಾಯಿತು" ಎಂದು ಟ್ರ್ಯಾಪಿಯರ್ ಹೇಳಿದ್ದಾರೆ.

2015ರ ಏಪ್ರಿಲ್ 10ರಂದು ಸಂಜೆ ನಡೆದ ಮೋದಿಯವರ ಪತ್ರಿಕಾಗೋಷ್ಠಿಯ ಅವಧಿಯಲ್ಲಷ್ಟೇ, ಡಸಾಲ್ಟ್‍ನಿಂದ 36 ಯುದ್ಧವಿಮಾನಗಳನ್ನು ಖರೀದಿಸುವ ಭಾರತದ ನಿರ್ಧಾರ ನಮಗೆ ತಿಳಿಯಿತು ಎಂದು ಅವರು ಕ್ಷಣಕಾಲದ ಬಳಿಕ ಸ್ಪಷ್ಟಪಡಿಸಿದರು.

ಟ್ರ್ಯಾಪಿಯರ್ ಅವರ ಹೇಳಿಕೆ ಮಹತ್ವದ್ದು; ಏಕೆಂದರೆ, ಈ ಘೋಷಣೆ ಮೋದಿಯವರ ಏಕಪಕ್ಷೀಯ ನಿರ್ಧಾರ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಆ ಅವಧಿಯಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರಿಕ್ಕರ್ ಕೂಡಾ 2015ರ ಏಪ್ರಿಲ್ 13ರಂದು ಟಿವಿ ಚಾನಲ್‍ಗೆ ನೀಡಿದ ಹೇಳಿಕೆಯಲ್ಲೂ ಇದನ್ನು ಸ್ಪಷ್ಟಪಡಿಸಿದ್ದರು. 36 ಯುದ್ಧವಿಮಾನಗಳನ್ನು ಹಾರಾಟದ ಸ್ಥಿತಿಯಲ್ಲಿ ಖರೀದಿ ಮಾಡುವ ನಿರ್ಧಾರವನ್ನು ಮೋದಿಯೊಬ್ಬರೇ ತೆಗೆದುಕೊಂಡಿದ್ದಾರೆ ಎಂದು ಪಾರಿಕ್ಕರ್ ಬಹಿರಂಗಪಡಿಸಿದ್ದರು.

ಸೂಕ್ತ ಅನುಮೋದನೆ ಪಡೆದ ಖರೀದಿ ಪ್ರಕ್ರಿಯೆಯನ್ನು ಕೈಬಿಟ್ಟು, ಅದನ್ನು ಬದಲಿಸಿ ಹೊಸದಾಗಿ ಏಕಪಕ್ಷೀಯವಾಗಿ ಒಪ್ಪಂದ ಮಾಡಿಕೊಂಡ ಕ್ರಮ ಸಿಬಿಐನಲ್ಲಿ ಸಲ್ಲಿಕೆಯಾಗಿರುವ ಅಪರಾಧ ಪ್ರಕರಣ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಮುಖ ಅಂಶ.

2. ಡಸಾಲ್ಟ್- ಎಚ್‍ಎಎಲ್ ಸಂಬಂಧ ಕುರಿತ ಸ್ಥಿತಿಗತಿ ಕುರಿತ ಪ್ರಶ್ನೆ

ಒಪ್ಪಂದ ಬದಲಾದ ಸಂದರ್ಭದಲ್ಲಿ ಡಸಾಲ್ಟ್ ಮತ್ತು ಎಚ್‍ಎಎಲ್ ನಡುವಿನ ಸಂಧಾನ ಮಾತುಕತೆ ಬಗ್ಗೆ ಕೇಳಿದ ಪ್ರಶ್ನೆಗೆ ಟ್ರ್ಯಾಪಿಯರ್, "2007ರಲ್ಲಿ ಸಲ್ಲಿಕೆಯಾಗಿರುವ ಪ್ರಸ್ತಾವನೆಯ ಮನವಿ ಸ್ಪಷ್ಟವಾಗಿತ್ತು. ಆ ಪ್ರಸ್ತಾವನೆಯ ಕೋರಿಕೆಯಲ್ಲಿ ನಾವು ಗೆದ್ದಿದ್ದೆವು. ಇದರ ಪ್ರಕಾರ, ಅಗ್ರಗಣ್ಯ ಉತ್ಪಾದನಾ ಏಜೆನ್ಸಿಯಾಗಿದ್ದ ಎಚ್‍ಎಎಲ್ ಜತೆ ನಾವು ಒಪ್ಪಂದ ಮಾಡಿಕೊಳ್ಳಬೇಕಿತ್ತು. ನಾವು ಅವರ ಜತೆ ಮಾತುಕತೆ ನಡೆಸಬೇಕಿತ್ತು. ಏಕೆಂದರೆ ಸ್ಥಳೀಯ ಉತ್ಪಾದನೆ ಮತ್ತು ಜೋಡಣೆ ಪ್ರಕ್ರಿಯೆ ಅವರಲ್ಲೇ ನಡೆಯಬೇಕಿತ್ತು. ಆದ್ದರಿಂದ ದೀರ್ಘಕಾಲದವರೆಗೆ ಅವರ ಜತೆ ಚರ್ಚೆ ನಡೆಸಿದ್ದೆವು" ಎಂದ ಅವರು ಕ್ಷಣಕಾಲ ಬಿಟ್ಟು, "ನಾವು ಚರ್ಚೆಯಲ್ಲಿದ್ದೆವು ಎಂದು ನಾನು ಹೇಳಲಾರೆ; ಏಕೆಂದರೆ ಈ ಘೋಷಣೆಗೆ ಕೆಲ ತಿಂಗಳ ಮೊದಲು, ಎಚ್‍ಎಎಲ್ ಕೂಡಾ ಭಾಗವಾಗಿದ್ದ, ಭಾರತ ಸರ್ಕಾರದ ಜತೆಗಿನ ಚರ್ಚೆಗಳು ಹೆಚ್ಚು ಸಕ್ರಿಯವಾಗಿರಲಿಲ್ಲ. ಎಚ್‍ಎಎಲ್ ಜತೆಗೆ ನಾವು ಕೆಲಸ ಹಂಚಿಕೆಯ ವಿವರಗಳ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದ್ದೆವು. ಡಸಾಲ್ಟ್‍ಗೆ ಎಚ್‍ಎಎಲ್ ಸದಾ ಒಳ್ಳೆಯ ಪಾಲುದಾರ ಕಂಪನಿ ಎಂದು ನಾನು ಹೇಳಲೇಬೇಕು. ನನಗೆ ಎಚ್‍ಎಎಲ್ ಬಗ್ಗೆ ಚೆನ್ನಾಗಿ ಗೊತ್ತು; ಏಕೆಂದರೆ ನಾನು ಎಚ್‍ಎಎಲ್ ಜತೆಗೆ 1990ರ ದಶಕದಿಂದಲೂ ಕೆಲಸ ಮಾಡುತ್ತಿದ್ದೇನೆ. ಆ ಕಂಪನಿ ಬಗ್ಗೆ ನನಗೆ ಅಪಾರ ಗೌರವವಿದೆ" ಎಂದು ವಿವರಿಸಿದರು.

ಕಾಕತಾಳೀಯವೆಂದರೆ ಟ್ರ್ಯಾಪಿಯರ್ ಅವರು, ಡಸಾಲ್ಟ್ ಏವಿಯೇಶನ್‍ನ 2014ರ ವಾರ್ಷಿಕ ವರದಿಯನ್ನು 2015ರ ಮಾರ್ಚ್ 10ರಂದು ಬಿಡುಗಡೆ ಮಾಡಿದ್ದರು. ಈ ವರದಿಯಲ್ಲಿ ಅವರು, "ಭಾರತದ ಅಧಿಕಾರಿಗಳ ಜತೆಗೆ ಮತ್ತು ಭಾರತದ ಕೈಗಾರಿಕಾ ಪಾಲುದಾರ ಕಂಪನಿಯ ಜತೆಗೆ 126 ರಫೇಲ್ ಯುದ್ಧವಿಮಾನಗಳನ್ನು ಮಾರಾಟ ಮಾಡುವ ಒಪ್ಪಂದ ಅಂತಿಮಪಡಿಸುವ ಬಗ್ಗೆ ವಿಶೇಷ ಸಂಧಾನ ಮಾತುಕತೆ ನಡೆಯುತ್ತಿದೆ" ಎಂದು ಉಲ್ಲೇಖಿಸಿದ್ದರು. 15 ದಿನಗಳ ಬಳಿಕ, ಪತ್ರಿಕಾಗೋಷ್ಠಿಯೊಂದರಲ್ಲಿ, 126 ರಫೇಲ್ ಯುದ್ಧವಿಮಾನಗಳ ಮಾರಾಟಕ್ಕೆ ಸಂಬಂಧಿಸಿದ ಮಾತುಕತೆಗಳು ಶೇಕಡ 95ರಷ್ಟು ಪೂರ್ಣಗೊಂಡಿವೆ. ಉಭಯ ಪಕ್ಷಗಳು ಮತ್ತೊಮ್ಮೆ ಗುತ್ತಿಗೆ ದಾಖಲೆಗಳ ಪರಿಶೀಲನೆಯಲ್ಲಿವೆ. ಈ ಒಪ್ಪಂದ ಬೃಹತ್ ಒಪ್ಪಂದವಾಗಿದ್ದು, ಸಾವಿರಾರು ಪುಟಗಳಿರುವುದರಿಂದ ಭವಿಷ್ಯದಲ್ಲಿ ಯಾವುದೇ ಸಂಕೀರ್ಣತೆಗಳು ಸಂಭವಿಸದಂತೆ ಎಚ್ಚರ ವಹಿಸಲಾಗುತ್ತಿದೆ. 2015ರ ಮಾರ್ಚ್ 25ರಂದು ಭಾರತೀಯ ವಾಯುಪಡೆಗೆ ಮೇಲ್ದರ್ಜೆಗೇರಿಸಿರುವ ಎರಡು ಮೀರಜ್ 2000 ಯುದ್ಧವಿಮಾನಗಳ ಹಸ್ತಾಂತರದ ವೇಳೆ ಅವರು, ಫ್ರಾನ್ಸ್‍ನಲ್ಲಿದ್ದ ಭಾರತೀಯ ರಾಯಭಾರಿ, ಹಿರಿಯ ಎಚ್‍ಎಲ್ ಅಧಿಕಾರಿಗಳು ಮತ್ತು ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲಿ, 126 ಯುದ್ಧವಿಮಾನಗಳ ಖರೀದಿ ಒಪ್ಪಂದಕ್ಕೆ ಸದ್ಯದಲ್ಲೇ ಸಹಿ ಮಾಡುವ ನಿರೀಕ್ಷೆ ಇದ್ದು, ಇದರಿಂದ ಡಸಾಲ್ಟ್ ಮತ್ತು ಎಚ್‍ಎಎಲ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಘೋಷಿಸಿದ್ದರು.

ಟ್ರ್ಯಾಪಿಯರ್ ಅವರ ಈ ಹೇಳಿಕೆಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೋದಿ ಸರ್ಕಾರದ ಇತರರು ನೀಡುತ್ತಿರುವ ಹೇಳಿಕೆಗಳ ಜತೆ ಹೋಲಿಸಲು ಸಾಧ್ಯವಾಗುತ್ತಿಲ್ಲ. ಮೋದಿ ಸರ್ಕಾರದಲ್ಲಿರುವವರು ಹೇಳುತ್ತಿರುವ ಪ್ರಕಾರ, ಎಚ್‍ಎಎಲ್ ಪರಿಸ್ಥಿತಿ ಗಂಭೀರವಾಗಿದ್ದು, ಎಚ್‍ಎಎಲ್ ಜತೆ ಸೇರಿ ಕಾರ್ಯನಿರ್ವಹಿಸಲು ಡಸಾಲ್ಟ್‍ಗೆ ಆಸಕ್ತಿ ಇಲ್ಲದ ಹಿನ್ನೆಲೆಯಲ್ಲಿ 126 ವಿಮಾನಗಳ ಖರೀದಿ ಮಾತುಕತೆ ಮುರಿದುಬಿದ್ದಿದೆ.

ಮೋದಿ ಘೋಷಣೆಗೆ ಮುನ್ನ ನಡೆಯುತ್ತಿದ್ದ ಮಾತುಕತೆಯನ್ನು ಏಕೆ ಕೈಬಿಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರ್ಯಾಪಿಯರ್, ಈ ಪ್ರಶ್ನೆಗೆ ಭಾರತ ಸರ್ಕಾರ ಉತ್ತರಿಸಬೇಕು ಎಂದು ಪ್ರತಿಕ್ರಿಯಿಸಿದರು. “ಆದರೆ ಎಲ್ಲ 126 ವಿಮಾನಗಳಿಗೆ ಡಸಾಲ್ಟ್ ಕಂಪನಿ ಖಾತ್ರಿ ನೀಡುವ ವಿಚಾರದಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಆರಂಭಿಕವಾಗಿ ಡಸಾಲ್ಟ್ ಉತ್ಪಾದಿಸುವ 18 ವಿಮಾನಗಳಿಗಷ್ಟೇ ಖಾತ್ರಿ ನೀಡುವುದಾಗಿ ಡಸಾಲ್ಟ್ ಸ್ಪಷ್ಟಪಡಿಸಿತ್ತು. ಭಾರತದಲ್ಲಿ ಉತ್ಪಾದನೆಯಾಗುವ ಉಳಿದ 108 ವಿಮಾನಗಳಿಗೆ ಎಚ್‍ಎಎಲ್ ಖಾತರಿ ನೀಡಬೇಕು ಎನ್ನುವುದು ನಮ್ಮ ನಿಲುವಾಗಿತ್ತು” ಎಂದು ಸ್ಪಷ್ಟಪಡಿಸಿದರು. "ಎಚ್‍ಎಎಲ್ ಖಾತರಿ ನೀಡುವ ವಿಚಾರ ಬಹುಶಃ ಭಾರತ ಸರ್ಕಾರಕ್ಕೆ ಸಮಸ್ಯೆಯಾಗಿರಬಹುದು" ಎಂದು ಅವರು ಹೇಳಿದರು. ಎಚ್‍ಎಎಲ್‍ನ ಮಾಜಿ ಮುಖ್ಯಸ್ಥ ಸುವರ್ಣ ರಾಜು ಈ ಸಂಬಂಧ ನೀಡಿದ ಹೇಳಿಕೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. "ಡಸಾಲ್ಟ್ ಮತ್ತು ಎಚ್‍ಎಎಲ್ ಪರಸ್ಪರ ಕೆಲಸ ಹಂಚಿಕೆ ಒಡಂಬಡಿಕೆಗೆ ಸಹಿ ಮಾಡಿ, ಸರ್ಕಾರಕ್ಕೆ ನೀಡಿದ್ದವು. ಈ ಕಡತವನ್ನು ಏಕೆ ಬಹಿರಂಗಪಡಿಸಬಾರದು ಎಂದು ಸರ್ಕಾರಕ್ಕೆ ನೀವೇಕೆ ಕೇಳಬಾರದು?, ಈ ಕಡತ ನಿಮಗೆ ಎಲ್ಲವನ್ನೂ ಹೇಳುತ್ತದೆ. ನಾನು ವಿಮಾನಗಳನ್ನು ನಿರ್ಮಿಸಿದರೆ, ಅವುಗಳಿಗೆ ನಾನೇ ಖಾತ್ರಿ ನೀಡುತ್ತೇನೆ" ಎಂದು ಸುವರ್ಣರಾಜು ಹೇಳಿದ್ದರು.

ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ, 126 ವಿಮಾನಗಳ ಖರೀದಿ ಒಪ್ಪಂದ ಅಂತಿಮವಾಗದಿರಲು ಎಚ್‍ಎಎಲ್ ಕಾರಣ ಎಂದು ಸರ್ಕಾರ ಗೂಬೆಕೂರಿಸಲು ಪ್ರಯತ್ನಿಸುತ್ತಿದೆ. ಆದರೆ ಎಚ್‍ಎಎಲ್ ಮುಖ್ಯಸ್ಥ ಮತ್ತು ಡಸಾಲ್ಟ್ ಸಿಇಒ ಇಬ್ಬರು ಕೂಡಾ ಬಹಿರಂಗವಾಗಿ, ನಾವು ಪರಸ್ಪರ ಜತೆ ಸೇರಿ ಕೆಲಸ ಮಾಡಲು ಉತ್ಸುಕರಾಗಿದ್ದೆವು ಎಂದು ಹೇಳುತ್ತಾರೆ.

3. ಒಂದರ ಬದಲು ಮತ್ತೊಂದು ರಿಲಯನ್ಸ್ ಉಲ್ಲೇಖಿಸಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ

ಡಸಾಲ್ಟ್ ರಿಲಯನ್ಸ್ ಏರೊಸ್ಪೇಸ್ ಲಿಮಿಟೆಡ್ ಎಂಬ ಜಂಟಿ ಸಹಭಾಗಿತ್ವ ಕಂಪನಿ ಸ್ಥಾಪಿಸಲು ಡಸಾಲ್ಟ್, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವನ್ನು ಆಯ್ಕೆ ಮಾಡಿಕೊಳ್ಳಲು ಏನು ಕಾರಣ ಎಂದು ಸಿಎನ್‍ಬಿಸಿ ಕೇಳಿದಾಗ, ರವಿಶಂಕರ್ ಪ್ರಸಾದ್ ಅವರಂಥ ಕೆಲ ಬಿಜೆಪಿ ಮುಖಂಡರ ಹೇಳಿಕೆಗೆ ಪೂರಕವಾಗಿ ಉದ್ದೇಶಪೂರ್ವಕವಾಗಿ ಅಂಬಾನಿ ಸಹೋದರರ ಪೈಕಿ ಮತ್ತೊಬ್ಬರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿದರು.

"ರಿಲಯನ್ಸ್ ಜತೆ 2011ರಲ್ಲಿ ನಾವು ಮೊದಲ ಒಪ್ಪಂದ ಮಾಡಿಕೊಂಡಿದ್ದೆವು. ನಿಖರವಾಗಿ ಹೇಳಬೇಕೆಂದರೆ, 2012ರ ಫೆಬ್ರವರಿಯಲ್ಲಿ ನಾವು ರಿಲಯನ್ಸ್ ಜತೆ ಮೊದಲ ಒಪ್ಪಂದ ಮಾಡಿಕೊಂಡಿದ್ದೆವು" ಎಂದು ಟ್ರ್ಯಾಪಿಯರ್ ಹೇಳಿದರು.

ಒಂದು ಕ್ಷಣದಲ್ಲಿ ಅವರು, "ಎಚ್‍ಎಎಲ್ ಪ್ರಮುಖ ಉತ್ಪಾದನಾ ಏಜೆನ್ಸಿಯಾಗಿರುವುದರಿಂದ ಪ್ರಮುಖ ಒಪ್ಪಂದ ಎಚ್‍ಎಎಲ್ ಜತೆಗೆ ಇರಬಹುದು. ಭಾರತದಲ್ಲಿ ಉತ್ಪಾದನೆಯಾದ ರಫೇಲ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಡಸಾಲ್ಟ್‍ನ ನಿರ್ದಿಷ್ಟ ಜವಾಬ್ದಾರಿ ಹಾಗೂ ಹೊಣೆಗಾರಿಕೆಯೊಂದಿಗೆ ಅವರು ವಿತರಿಸಬೇಕಿತ್ತು. ಡಸಾಲ್ಟ್ ‘ರಿಲಯನ್ಸ್ ಸಮೂಹ’ ದ ಜತೆ ಸೇರಿ ಕಾರ್ಯನಿರ್ವಹಿಸಲು ಬಯಸಿದೆ. ಡಸಾಲ್ಟ್‍ನ ವಾಣಿಜ್ಯ ಜೆಟ್ ಫಾಲ್ಕನ್ ಸರಣಿಯ ವಿಮಾನಗಳಿಗೆ ರೆಕ್ಕೆಗಳನ್ನು ತಯಾರಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ವಿವರ ನೀಡಿದರು.

ರಿಲಯನ್ಸ್ ಸಮೂಹದ ಪ್ರಸ್ತಾವ ಮಾಡಿರುವ ಟ್ರ್ಯಾಪಿಯರ್ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು; ಅನಿಲ್ ಅಂಬಾನಿಯವರ ಅಣ್ಣ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‍ಐಎಲ್) ಜತೆಗೆ 2012ರ ಫೆಬ್ರವರಿಯಲ್ಲಿ ಡಸಾಲ್ಟ್, ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಎಂಎಂಆರ್‍ಸಿಎ ಟೆಂಡರ್‍ನಲ್ಲಿ ಡಸಾಲ್ಟ್ ಯಶಸ್ವಿಯಾಗಿರುವುದನ್ನು ಘೋಷಿಸಿದ ತಕ್ಷಣ, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ರಕ್ಷಣಾ ವಿಮಾನ ವಹಿವಾಟು ಆರಂಭಿಸಲು ನಿರ್ಧರಿಸಿತು. ಸಮೂಹದ ಕಂಪನಿಗಳಲ್ಲೊಂದಾದ, 2008ರ ಸೆಪ್ಟೆಂಬರ್ 4ರಲ್ಲಿ ಆರಂಭವಾದ ರಿಲಯನ್ಸ್ ಗ್ಯಾಸ್ ಮಾರ್ಕೆಟಿಂಗ್ ಕಂಪನಿಯನ್ನು ರಿಲಯನ್ ಏರೊಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್ (ಆರ್‍ಎಟಿಎಲ್) ಎಂದು ಮರುನಾಮಕರಣ ಮಾಡಲಾಯಿತು. ಡಸಾಲ್ಟ್ ಏವಿಯೇಶನ್ 2012ರ ಫೆಬ್ರವರಿಯಲ್ಲಿ ಆರ್‍ಎಟಿಎಲ್ ಜತೆ ಒಪ್ಪಂದ ಮಾಡಿಕೊಂಡಿತು. 2012ರ ಫೆಬ್ರವರಿ 13ರಂದು, ಡಸಾಲ್ಟ್ ಮತು ಆರ್‍ಐಎಲ್ ನಡುವಿನ ಒಪ್ಪಂದದ ಬಗ್ಗೆ ವರದಿ ಪ್ರಕಟಿಸಿದ ಟೈಮ್ಸ್ ಆಫ್ ಇಂಡಿಯಾ, "ತೈಲ ಮತ್ತು ಅನಿಲ ವಹಿವಾಟು ಕುಗ್ಗಿರುವ ಹಿನ್ನೆಲೆಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಪ್ರಗತಿಯನ್ನು ವೈವಿಧ್ಯಮಯಗೊಳಿಸಲು ಉದ್ದೇಶಿಸಿದೆ" ಎಂದು ಹೇಳಿತ್ತು.  ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದ ಪ್ರಮುಖ ವಹಿವಾಟು ಎಂದೂ ತೈಲ ಮತ್ತು ಅನಿಲ ಆಗಿರಲಿಲ್ಲ. ಬದಲಿಗೆ ದೂರಸಂಪರ್ಕ ಮತ್ತು ಮೂಲಸೌಕರ್ಯ ಅವರ ಪ್ರಮುಖ ವಹಿವಾಟು.

ಸರ್ಕಾರ, ಪತ್ರಕರ್ತರು ಮತ್ತು ಕಾರ್ಪೊರೇಟ್ ಜಗತ್ತು ತಿಳಿದಂತೆ ಮುಕೇಶ್ ಹಾಗೂ ಅನಿಲ್ ಅಂಬಾನಿ ಇಬ್ಬರ ಉದ್ಯಮ ಸಮೂಹಗಳಿಗೂ ರಿಲಯನ್ಸ್ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಮಾಲಕ. ಅನಿಲ್ ಅಂಬಾನಿ ಸಮೂಹಕ್ಕೆ ರಿಲಯನ್ಸ್ ಎಡಿಎಜಿ (ಅನಿಲ್ ದೀರಜ್‍ ಲಾಲ್ ಅಂಬಾನಿ ಗ್ರೂಪ್) ಎಂದು ಹೆಸರು. ಇತ್ತೀಚೆಗೆ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದಂತೆ, "ಆಫ್‍ಸೆಟ್ಸ್ ಒಪ್ಪಂದಕ್ಕೆ ಸಂಬಂಧಿಸಿದ ಒಡಂಬಡಿಕೆ ಅನೂರ್ಜಿತಗೊಳಿಸಲಾಗಿದೆ. ರಿಲಯನ್ ಈ ವಹಿವಾಟಿನಿಂದ ಹೊರಗುಳಿಯಲು ನಿರ್ಧರಿಸಿದೆ. ಸಾಕಷ್ಟು ಸುತ್ತಿನ ಚರ್ಚೆಗಳು ಮತ್ತು ಮಾತುಕತೆಗಳು ನಡೆದಿದ್ದು, ಅದಕ್ಕಿಂತ ಹೆಚ್ಚಿನ ಏನೂ ಸಾಧನೆಯಾಗಿಲ್ಲ. ಇಷ್ಟಾಗಿಯೂ ಮಾತುಕತೆ ಪರಿಕಲ್ಪನೆ ಹಂತಕ್ಕೂ ಬಂದಿಲ್ಲ. ಒಡಂಬಡಿಕೆಯ ಅವಧಿ ಮುಗಿದಾಗ ನವೀಕರಿಸಲೂ ಇಲ್ಲ". ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಮುಖೇಶ್ ಅಂಬಾನಿ ಕಂಪನಿಯ ಜತೆ ಪಾಲುದಾರಿಕೆ ಮಾಡಿಕೊಳ್ಳುವ ಡಸಾಲ್ಟ್‍ನ ಆಸಕ್ತಿ ಕೊನೆಗೊಂಡಿತು ಎಂದು ವರದಿ ಸ್ಪಷ್ಟಪಡಿಸಿದೆ.

ಟ್ರ್ಯಾಪಿಯರ್ ಅವರಿಗೆ ಎರಡು ರಿಲಯನ್ಸ್ ಸಮೂಹಗಳ ನಡುವಿನ ವ್ಯತ್ಯಾಸದ ಬಗೆಗೆ ಅರಿವು ಇಲ್ಲ ಎಂದು ನಾವು ಒಂದು ಕ್ಷಣ ಕಲ್ಪಿಸಿಕೊಳ್ಳುವಂತೆಯೂ ಇಲ್ಲ. ಡಸಾಲ್ಟ್ 2012ರಲ್ಲಿ ಮುಖೇಶ್ ಅಂಬಾನಿಯವರ ಆರ್‍ಐಎಲ್ ಜತೆ ಒಪ್ಪಂದ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದಾಗ, ವಾಸ್ತವವಾಗಿ ಅವರ ಕಂಪನಿ ಯಾವಾಗ ಅನಿಲ್ ಅಂಬಾನಿಯವರ ರಿಲಯನ್ಸ್ ಜತೆ ಒಪ್ಪಂದ ಮಾಡಿಕೊಂಡಿತು ಎಂದು ಪ್ರಶ್ನಿಸಬೇಕಾಗುತ್ತದೆ. ವಾಸ್ತವವೆಂದರೆ ಮೋದಿ ಸರ್ಕಾರದ ಹಿರಿಯ ಸಚಿವರು ಈ ತಪ್ಪು ಮಾಹಿತಿಯನ್ನು ಚೆನ್ನಾಗಿ ಬಿತ್ತಿದ್ದಾರೆ. ರಫೇಲ್ ಒಪ್ಪಂದದ ವಿಚಾರದಲ್ಲಿ ಸರ್ಕಾರದ ಸಮರ್ಥನೆ ದುರ್ಬಲವಾಗಿದೆ ಎನ್ನುವುದಕ್ಕೆ ಇದು ಸಾಕ್ಷಿ.

4. ವಿಮಾನ ನಿಲ್ದಾಣ ಸಮೀಪ ಜಮೀನು ಇದೆ ಎಂಬ ಕಾರಣಕ್ಕೆ ಅನಿಲ್ ಅಂಬಾನಿಯವರನ್ನು ಡಸಾಲ್ಟ್ ಆಯ್ಕೆ ಮಾಡಿಕೊಂಡಿದೆಯೇ?

ಟ್ರ್ಯಾಪಿಯರ್ ಅವರಿಗೆ ಕೇಳಿದ ಮುಂದಿನ ಪ್ರಶ್ನೆ, ರಕ್ಷಣಾ ವಿಮಾನದಂತಹ ತಾಂತ್ರಿಕ ಕ್ಷೇತ್ರದಲ್ಲಿ ತೀರಾ ವಿಶೇಷ ಪರಿಣತಿ ಹೊಂದಿರುವ ಡಸಾಲ್ಟ್ ಏವಿಯೇಶನ್‍ನಂಥ ಸಂಸ್ಥೆ, ವಿಮಾನ ಅಥವಾ ವಿಮಾನದ ಬಿಡಿಭಾಗಗಳ ಉತ್ಪಾದನೆಯಲ್ಲಿ ಕೂಡಾ ಅನುಭವ ಇಲ್ಲದ, ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾದ ರಿಲಯನ್ಸ್‍ನಂಥ ಕಂಪನಿಯಲ್ಲಿ ಜಂಟಿ ಸಹಭಾಗಿತ್ವದ ಪಾಲುದಾರ ಕಂಪನಿಗಾಗಿ ಏಕೆ ಆಯ್ಕೆ ಮಾಡಿಕೊಂಡಿತು ಎನ್ನುವುದು. ಫ್ರಾನ್ಸ್‍ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಕಳೆದ ಸೆಪ್ಟೆಂಬರ್‍ನಲ್ಲಿ ಹೇಳಿಕೆ ನೀಡಿ, ಅನಿಲ್ ಅಂಬಾನಿ ಸಮೂಹವನ್ನು ಆಯ್ಕೆ ಮಾಡಿಕೊಳ್ಳುವಂತೆ ಭಾರತದ ಕಡೆಯಿಂದ ಒತ್ತಡ ಇತ್ತು ಎಂದು ಬಹಿರಂಗಪಡಿಸಿದ್ದ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ವಿಶೇಷ ಮಹತ್ವವಿದೆ.

ಈ ಪ್ರಶ್ನೆಗೆ ಟ್ರ್ಯಾಪಿಯರ್ ನೀಡಿದ ಉತ್ತರದಿಂದ ಕೊಳಕು ನೀರನ್ನು ಮತ್ತಷ್ಟು ಕೆದಕಿದಂತಾಗಿದೆ. "ಇದು ರಫೇಲ್ ಮಾತ್ರವಲ್ಲ. ಫಾಲ್ಕನ್ ಕೂಡಾ" ಎಂದು ಅವರು ಹೇಳಿದರು. ಗ್ರಾಹಕರು ಕಾಯುತ್ತಿರುವುದರಿಂದ ಡಸಾಲ್ಟ್ ರಫೇಲ್ ವಿಚಾರದಲ್ಲಿ ವಿಳಂಬ ಮಾಡುವಂತಿಲ್ಲ. ಆದರೆ ಇದು ಮೂಲದಿಂದಲೇ ಆರಂಭಿಸಬೇಕಿರುವುದರಿಂದ ಡಸಾಲ್ಟ್ ಫಾಲ್ಕನ್‍ಗೆ ಆದ್ಯತೆ ನೀಡುತ್ತದೆ. ಇಲ್ಲಿ ಸ್ವಲ್ಪ ವಿಳಂಬಕ್ಕೆ ಅವಕಾಶವಿದೆ. ತಾವು ಮೊದಲು ಹೇಳಿದ್ದನ್ನೇ ಟ್ರ್ಯಾಪಿಯರ್ ಪುನರುಚ್ಚರಿಸಿ, "ರಿಲಯನ್ಸ್ ಕಂಪನಿಯನ್ನು ಜಂಟಿ ಸಹಭಾಗಿತ್ವದ ಪಾಲುದಾರ ಕಂಪನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೆಂದರೆ, ವಿಮಾನ ನಿಲ್ದಾಣದ ಸನಿಹದಲ್ಲಿ ಜಮೀನು ಇರುವ ಕಂಪನಿ ನಮಗೆ ಬೇಕಾಗಿತ್ತು. ಫ್ಯಾಕ್ಟರಿ ಆರಂಭಿಸಲು ಮತ್ತು ಫಾಲ್ಕನ್ 2000 ಸರಣಿಯ ವಿಮಾನಗಳನ್ನು ಜೋಡಿಸಲು ಇಲ್ಲಿ ವ್ಯವಸ್ಥೆ ಮಾಡಲು ಉದ್ದೇಶಿಸಿದ್ದೆವು. ರಿಲಯನ್ಸ್ ಪ್ರಬಲ ಉದ್ಯಮ ಸಮೂಹವಾಗಿದ್ದು, ನಾಗ್ಪುರದಲ್ಲಿ ಇಂಥ ಭೂಮಿ ಹೊಂದಿದೆ. ಇನ್ನೊಂದೆಡೆ ಬೆಂಗಳೂರು ದಟ್ಟಣೆಯ ನಗರವಾಗಿದ್ದು, ಎಚ್‍ಎಎಲ್ ಬಳಿ ಇಂಥ ಭೂಮಿ ಇಲ್ಲ" ಎಂದು ವಿವರಿಸಿದರು.

ಟ್ರ್ಯಾಪಿಯರ್ ಅವರ ವಿವರಣೆಯಲ್ಲಿ ಮೂರು ಪ್ರಮುಖ ಅಂಶಗಳಿವೆ. ಅವರು ಹೇಳಿರುವುದರಿಂದ ಆಗುವ ಹಾನಿಕಾರಕ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೂರನ್ನೂ ಪ್ರತ್ಯೇಕವಾಗಿ ಪರಿಶೀಲಿಸಬೇಕು.

ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್, ಡಸಾಲ್ಟ್ ಏವಿಯೇಶನ್ ಮತ್ತು ರಿಲಯನ್ಸ್ ಎಡಿಎಜಿಯ ರಿಲಯನ್ಸ್ ಏರೊಸ್ಟ್ರಕ್ಚರ್ ಲಿಮಿಟೆಡ್ ನಡುವಿನ ಜಂಟಿ ಸಹಭಾಗಿತ್ವದ ಕಂಪನಿ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಪ್ರಕಾರ, ಆರ್‍ಎಎಲ್ ಆರಂಭವಾಗಿರುವುದು 2015ರ ಏಪ್ರಿಲ್ 24ರಂದು.  ಮೋದಿ ರಫೇಲ್ ಒಪ್ಪಂದವನ್ನು ಘೋಷಿಸಿದ ಒಂದು ವಾರದ ಬಳಿಕ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್‍ನ ಸಹ ಸಂಸ್ಥೆಯಾಗಿ ಇದು ಅಸ್ತಿತ್ವಕ್ಕೆ ಬಂದಿದೆ. 36 ರಫೇಲ್ ವಿಮಾನಗಳ ಖರೀದಿ ನಿರ್ಧಾರವನ್ನು ಮೋದಿ ಘೋಷಿಸುವ ಎರಡು ವಾರಕ್ಕೆ ಮುನ್ನ ಅಂದರೆ 2015ರ ಮಾರ್ಚ್ 28ರಂದು ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಆರಂಭವಾಗಿದೆ.

2018ರ ಏಪ್ರಿಲ್ 23ರಂದು ಡಸಾಲ್ಟ್ ಏವಿಯೇಶನ್ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಆರ್‍ಎಎಲ್ ಜತೆ ಸೇರಿ 2015ರ ಏಪ್ರಿಲ್‍ನಲ್ಲಿ ಜಂಟಿ ಸಹಭಾಗಿತ್ವದ ಕಂಪನಿ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು. ಆದರೆ ಇದು ಟ್ರ್ಯಾಪಿಯರ್ ಸಂದರ್ಶನದಲ್ಲಿ ಹೇಳಿದ ಅಂಶಕ್ಕೆ ತದ್ವಿರುದ್ಧವಾಗಿದೆ. ಡಸಾಲ್ಟ್ 2015ರ ಏಪ್ರಿಲ್‍ನಲ್ಲಿ ಆರ್‍ಎಎಲ್ ಜತೆ ಜಂಟಿ ಸಹಭಾಗಿತ್ವದ ಕಂಪನಿ ಆರಂಭಿಸಿದ್ದರೆ, ಆಗ ಅದು ದಾಖಲೆಗಳಲ್ಲಷ್ಟೇ ಇದ್ದ ಕಂಪನಿ. ಏಕೆಂದರೆ ಅದು ಆರಂಭವಾಗಿರುವುದು 2015ರ ಏಪ್ರಿಲ್ 24ರಂದು. ಅದಕ್ಕೆ ಯಾವುದೇ ಭೂಮಿ ಅಥವಾ ಆಸ್ತಿಗಳು ಇರಲಿಲ್ಲ. ರಿಲಯನ್ಸ್ ಎಡಿಎಜಿ ಸಮೂಹ ಕಂಪನಿಯಾದ ರಿಲಯನ್ಸ್ ಕ್ಯಾಪಿಟಲ್, 2015ರ ಆಗಸ್ಟ್ 29ರಂದು ನೀಡಿದ ಪತ್ರಿಕಾ ಹೇಳಿಕೆಯ ಪ್ರಕಾರ, 2015ರ ಜೂನ್ 16ರಂದು ಆರ್‍ಎಎಲ್ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಭೂಮಿ ಮಂಜೂರು ಮಾಡುವಂತೆ ಕೋರಿತ್ತು. ಡಸಾಲ್ಟ್, ಆರ್‍ಎಎಲ್ ಜತೆ ಜಂಟಿ ಸಹಭಾಗಿತ್ವದ ಕಂಪನಿ ಮಾಡಿಕೊಂಡಿದೆ ಎನ್ನಲಾದ ದಿನಾಂಕದಿಂದ ಒಂದೂವರೆ ತಿಂಗಳ ಬಳಿಕ ಭೂಮಿ ಮಂಜೂರಾತಿಗೆ ರಿಲಯನ್ಸ್ ಮನವಿ ಸಲ್ಲಿಸಿತ್ತು. 2015ರ ಆಗಸ್ಟ್ 29ರಂದು ನಾಗ್ಪುರದ ಮಿಹಾನ್‍ನಲ್ಲಿ ಆರ್‍ಎಎಲ್‍ಗೆ 289 ಎಕರೆ ಜಮೀನು ಮಂಜೂರಾಗಿದೆ.

ಎರಡನೆಯದಾಗಿ, ಆರ್‍ಎಎಲ್‍ಗೆ 289 ಎಕರೆ ಜಮೀನು ಮಂಜೂರಾದರೂ, ಅದು ಪಡೆದದ್ದು 104 ಎಕರೆ ಮಾತ್ರ. 2016ರ ಜನವರಿ 20ರಂದು ಟೈಮ್ಸ್ ಆಫ್ ಇಂಡಿಯಾದ ನಾಗ್ಪುರ ಆವೃತ್ತಿಯಲ್ಲಿ ಪ್ರಕಟವಾದ ವರದಿಯಂತೆ, "ಎಡಿಎಜಿ ಮೊದಲು 289 ಎಕರೆ ಜಮೀನು ಮಂಜೂರಾತಿಗೆ ಮನವಿ ಮಾಡಿಕೊಂಡಿತ್ತು. ಆದರೆ ತನ್ನ ಅಗತ್ಯತೆಯನ್ನು 104 ಎಕರೆಗೆ ಸೀಮಿತಗೊಳಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸಮಿತಿ 104 ಎಕರೆಯನ್ನು ನೀಡಿದ್ದು, ಕಂಪನಿಗಾಗಿ 185 ಎಕರೆಯನ್ನು ಮೀಸಲಿಟ್ಟಿದೆ"

2017ರ ಜುಲೈ 21ರಂದು ಪ್ರಕಟವಾದ ಅದೇ ಪತ್ರಿಕೆಯ ಇನ್ನೊಂದು ವರದಿಯಲ್ಲಿ, ನಾಗ್ಪುರ ವಿಮಾನ ನಿಲ್ದಾಣದ ಮುಖ್ಯ ರನ್‍ ವೇ ಮತ್ತು ಕಂಪನಿಗೆ ಮಂಜೂರಾದ ಜಮೀನಿನ ನಡುವೆ ಸಂಪರ್ಕ ಕಲ್ಪಿಸಲು ಟ

Writer - ರವಿ ನಾಯರ್, thewire.in

contributor

Editor - ರವಿ ನಾಯರ್, thewire.in

contributor

Similar News