×
Ad

ಅಧಿಕ ಟಿಕೆಟ್ ದರ ವಸೂಲಿ: 50 ಖಾಸಗಿ ಬಸ್‌ಗಳ ಮೇಲೆ ದಾಳಿ, ಕೇಸ್ ದಾಖಲು

Update: 2018-11-03 21:59 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.3: ದೀಪಾವಳಿ ಹಬ್ಬದ ಸಾಲು ರಜೆಯಲ್ಲಿ ಊರಿಗೆ ತೆರಳುವವರಿಗೆ ಅಧಿಕ ಟಿಕೆಟ್ ದರ ವಿಧಿಸುತ್ತಿರುವ ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸಿರುವ ಸಾರಿಗೆ ಅಧಿಕಾರಿಗಳು 50ಕ್ಕೂ ಅಧಿಕ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ಗೊರಗುಂಟೆಪಾಳ್ಯದ ಎಐಟಿಒಬಿ, ಮೆಜೆಸ್ಟಿಕ್, ಆನಂದರಾವ್ ವೃತ್ತ, ದೇವನಹಳ್ಳಿ ಟೋಲ್‌ಗೇಟ್ ಪ್ರದೇಶಗಳಲ್ಲಿ ಸಾರಿಗೆ ಅಧಿಕಾರಿಗಳ 5 ತಂಡಗಳು ತಪಾಸಣೆ ನಡೆಸಿದ್ದು, ನಿಗದಿಗಿಂತ ಅಧಿಕ ಪ್ರಯಾಣ ದರ ವಿಧಿಸಿದ್ದ ಬಸ್‌ಗಳು ಹಾಗೂ ಅಕ್ರಮವಾಗಿ ಸರಕು ಸಾಗಣೆ ಮಾಡುತ್ತಿದ್ದ ಬಸ್‌ಗಳ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

ಅನೇಕ ಖಾಸಗಿ ಬಸ್‌ಗಳಲ್ಲಿ 1 ಸಾವಿರ ರೂ. ಟಿಕೆಟ್ ದರದ ಬದಲು 2 ಸಾವಿರವರೆಗೂ ವಸೂಲಿ ಮಾಡಲಾಗುತ್ತಿದೆ. ಇಂತಹ ಬಸ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಲಾಗಿದೆ. ಅಲ್ಲದೆ, ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ. 30 ಇನ್ಸ್‌ಪೆಕ್ಟರ್‌ಗಳು, 20 ಅಧಿಕಾರಿಗಳನ್ನು ಒಳಗೊಂಡ 11 ತಂಡಗಳು ಅನುಮಾನ ಬಂದ ಸ್ಥಳಗಳಲ್ಲಿ ಸಂಜೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ತಪಾಸಣೆ ನಡೆಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News